ನಟಿ ರಮ್ಯಾ ಅವರು ಇಂದು (ನ.29) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 40ನೇ ವರ್ಷದ ಬರ್ತ್ಡೇ ಪ್ರಯುಕ್ತ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಶುಭಾಶಯ ತಿಳಿಸುತ್ತಿದ್ದಾರೆ.
ಜನ್ಮದಿನದ ಸಲುವಾಗಿ ರಮ್ಯಾ ಅವರು ವಿಶೇಷ ಸ್ಥಳಕ್ಕೆ ತೆರಳಿದ್ದಾರೆ. ಫ್ಲೋಟಿಂಗ್ ಫ್ಲವರ್ ಗಾರ್ಡನ್ನಲ್ಲಿ (Floating Flower Garden) ಹೂವುಗಳ ನಡುವೆ ಕುಳಿತು ಅವರು ಪೋಸ್ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮೋಹಕ ತಾರೆಯ ಅಭಿಮಾನಿಗಳ ವಲಯದಲ್ಲಿ ಈ ಫೋಟೋಗಳು ವೈರಲ್ ಆಗಿವೆ.
ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದ ಎಲ್ಲರಿಗೂ ರಮ್ಯಾ ಧನ್ಯವಾದ ಅರ್ಪಿಸಿದ್ದಾರೆ. ಚಿತ್ರರಂಗದಲ್ಲಿ ಅವರು ಇನ್ನೂ ಹೆಚ್ಚಿನ ಯಶಸ್ಸು ಪಡೆಯಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.
ದೊಡ್ಡ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ರಮ್ಯಾ ಮರಳಿದ್ದಾರೆ. ಡಾಲಿ ಧನಂಜಯ್ ಜೊತೆ ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ನಟಿಯಾಗಿ ಮಾತ್ರವಲ್ಲದೇ, ನಿರ್ಮಾಪಕಿ ಆಗಿಯೂ ರಮ್ಯಾ ಸಕ್ರಿಯರಾಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಿಸುತ್ತಿದ್ದಾರೆ.