
ನಟ ರಣವೀರ್ ಸಿಂಗ್ ಅವರು ಫಿಟ್ನೆಸ್ ಬಗ್ಗೆ ಸಖತ್ ಕಾಳಜಿ ವಹಿಸುತ್ತಾರೆ. ಸಿನಿಮಾದ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಜಿಮ್ನಲ್ಲಿ ವರ್ಕೌಟ್ ಮಾಡೋದು ತಪ್ಪಿಸುವುದಿಲ್ಲ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ. ತಮ್ಮ ಪಾತ್ರಕ್ಕಾಗಿ ರಣವೀರ್ ಸಿಂಗ್ ಅವರು ಕಟ್ಟುಮಸ್ತಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ.

ಕರಣ್ ಜೋಹರ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಬಹುವರ್ಷಗಳ ಬಳಿಕ ಅವರು ನಿರ್ದೇಶನ ಮಾಡಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಮನೆ ಮಾಡಿದೆ.

ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರ ಪಾತ್ರ ಹೇಗಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಈಗ ಚಿತ್ರತಂಡದಿಂದ ಹೊಸ ವಿಡಿಯೋ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ರಣವೀರ್ ಸಿಂಗ್ ಹೈಲೈಟ್ ಆಗಿದ್ದಾರೆ.

ಸೋಮವಾರ ಜಿಮ್ಗೆ ಹೋಗಿ ವರ್ಕೌಟ್ ಮಾಡೋಕೆ ಸೋಮಾರಿತನ ಇದೆ ಎನ್ನುವವರು ಈ ಫೋಟೋಸ್ ನೋಡಬೇಕು. ತಾವು ಕೂಡ ವರ್ಕೌಟ್ ಮಾಡಬೇಕು ಎಂದು ಪ್ರೇರಣೆ ನೀಡಲಿವೆ ಈ ಫೋಟೋಗಳು.

ರಣವೀರ್ ಸಿಂಗ್ ಅವರು ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಲಕ ಅವರಿಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಟ್ರೇಲರ್ ಜನಮೆಚ್ಚುಗೆ ಗಳಿಸಿದೆ. ಹಾಗಾಗಿ ರಣವೀರ್ ಸಿಂಗ್ ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾದಿದ್ದಾರೆ. ಜುಲೈ 28ರಂದು ಚಿತ್ರ ಬಿಡುಗಡೆ ಆಗಲಿದೆ.