
ನಟಿ ರಶ್ಮಿಕಾ ಮಂದಣ್ಣ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋದು ಅನೇಕರ ಗುಮಾನಿ. ಈ ಅನುಮಾನ ಸರಿಯಾಗಿದೆ.

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಮನೆಯಲ್ಲೇ ಈ ಬಾರಿಯ ದೀಪಾವಳಿ ಸೆಲೆಬ್ರೇಟ್ ಮಾಡಿದ್ದಾರೆ. ಈ ಮೊದಲು ಕೂಡ ಅವರು ಅನೇಕ ಹಬ್ಬಗಳನ್ನು ವಿಜಯ್ ಮನೆಯಲ್ಲಿ ಆಚರಣೆ ಮಾಡಿದ್ದರು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ರಶ್ಮಿಕಾ ಮಂದಣ್ಣ ಅವರು ದೀಪ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಫೋಟೋ ಕ್ರೆಡಿಟ್ನ ಆನಂದ್ ದೇವರಕೊಂಡ ಅವರಿಗೆ ನೀಡಿದ್ದಾರೆ. ಈ ಮೂಲಕ ರಶ್ಮಿಕಾ ಅವರು ವಿಜಯ್ ಮನೆಯಲ್ಲಿ ಹಬ್ಬ ಆಚರಿಸಿದ್ದು ಪಕ್ಕಾ ಆಗಿದೆ.

ಇನ್ನು ವಿಜಯ್ ದೇವರಕೊಂಡ ಆಗಲೀ ರಶ್ಮಿಕಾ ಆಗಲಿ ಒಟ್ಟಾಗಿ ನಿಂತು ಫೋಟೋಗೆ ಪೋಸ್ ಕೊಟ್ಟಿಲ್ಲ. ಆದರೆ, ವಿಜಯ್ ದೇವರಕೊಂಡ ಮನೆಯ ಗೋಡೆಯ ಬಣ್ಣ, ರಶ್ಮಿಕಾ ಪೋಸ್ ಕೊಟ್ಟ ಮನೆಯ ಬಣ್ಣ ಒಂದೇ ರೀತಿ ಇದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಇದೆ. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಈ ವಿಚಾರದಲ್ಲಿ ಸೀಕ್ರೇಟ್ ಕಾಯ್ದುಕೊಂಡಿದ್ದಾರೆ.