Kannada Rajyotsava 2024 : ಕರ್ನಾಟಕದಲ್ಲಿರುವ ಕನ್ನಡಮ್ಮ ಭುವನೇಶ್ವರಿ ದೇವಿಯ ದೇಗುಲಗಳಿವು

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ರಾಜ್ಯದ ಮೂಲೆ ಮೂಲೆಯಲ್ಲೂ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಣೆಗಳು ನಡೆಯುತ್ತದೆ. ನಾಡಿನೆಲ್ಲೆಡೆ ಕನ್ನಡ ನಾಡಿನ ಬಾವುಟ ರಾರಾಜಿಸುತ್ತವೆ. ಕನ್ನಡ ಭಾಷೆ ಮಾತನಾಡುವ ಎಲ್ಲಾ ಜನರಿರುವ ಪ್ರಾಂತ್ಯವನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನಾಗಿ ಮಾಡಿದ ದಿನವಿದಾಗಿದ್ದು, ಈ ವಿಶೇಷ ದಿನದಂದು ಕನ್ನಡಾಂಬೆಗೆ ಪೂಜೆ ಸಲ್ಲಿಸಲಾಗುತ್ತದೆ. ಕರ್ನಾಟಕದಲ್ಲಿ ಹಲವಾರು ಕನ್ನಡಮ್ಮನ ದೇವಾಲಯಗಳಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 31, 2024 | 6:16 PM

ಮೈಸೂರಿನ ಭುವನೇಶ್ವರಿ ದೇವಾಲಯ : ಮೈಸೂರು ಅರಮನೆಯ ಆವರಣದ ಉತ್ತರ ದ್ವಾರದ ಬಳಿ ಭುವನೇಶ್ವರಿ ದೇವಾಲಯವಿದೆ. ಗರ್ಭಗುಡಿಯಲ್ಲಿ ಭುವನೇಶ್ವರಿ ದೇವಿಯು ನೆಲೆಸಿದ್ದಾಳೆ. ಅರಮನೆಯ ವಾಸ್ತುಶಿಲ್ಪಿ ಸಿದ್ದಲಿಂಗಸ್ವಾಮಿಯವರೇ ಇದರ ವಾಸ್ತುಶಿಲ್ಪಿಯಾಗಿದ್ದು, ದ್ರಾವಿಡ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇಗುಲದಲ್ಲಿ ರಾಜರಾಜೇಶ್ವರಿ, ಚಾಮುಂಡೇಶ್ವರಿ, ಮಹೇಶ್ವರ, ಮಹಾಗಣಪತಿ, ಸೂರ್ಯನಾರಾಯಣ, ಮಹಾವಿಷ್ಣುವನ್ನು ಪೂಜಿಸಲಾಗುತ್ತದೆ.

1 / 5
ಬಾಗಲಕೋಟೆಯ ಭುವನೇಶ್ವರಿ ದೇಗುಲ : ಬಾಗಲಕೋಟೆ ಜಿಲ್ಲೆಯ ಕುಂದರಗಿ ಗ್ರಾಮದ ಬಳಿಯಿರುವ ಶಿರಿಗಿರಿ ಬೆಟ್ಟದಲ್ಲಿ ತಾಯಿ ಭುವನೇಶ್ವರಿ ದೇವಿಯೂ ನೆಲೆ ನಿಂತಿದ್ದಾಳೆ. ಇಲ್ಲಿ ಅಂಬಲಿ ತೀರ್ಥ ವಿಶೇಷವಾಗಿದ್ದು, ಇದನ್ನು ಕುಡಿದರೆ ಎಂತಹ ರೋಗ ರುಜಿನವಾದರೂ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭುವನೇಶ್ವರಿ ‌ದೇವಿಗೆ ಅಂಬಾರಿ ಮೆರವಣಿಗೆ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

2 / 5
ಹಂಪಿಯ ಭುವನೇಶ್ವರಿ ಮಂದಿರ : ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಉತ್ತರ ಭಾಗದಲ್ಲಿ ಭುವನೇಶ್ವರಿ ಮಂದಿರವಿದೆ. ಈ ದೇಗುಲವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದ್ದು, ಕ್ರಿ.ಶ. 12ನೇ ಶತಮಾನದ ರಚನೆಗಳಾಗಿವೆ. ಕಲ್ಯಾಣ ಚಾಲುಕ್ಯರ ಶೈಲಿಯಲ್ಲೆ ಶ್ರೀ ಭುವನೇಶ್ವರಿ ದೇವಿಯ ವಿಗ್ರಹ ಕೆತ್ತಲಾಗಿದೆ  ಈ ದೇವಸ್ಥಾನವು ಬಸಾಲ್ಟ್ ಶಿಲೆಯಲ್ಲಿ ಮಾಡಿದ ಇಲ್ಲಿನ‌ ದುಂಡಾದ ಕಂಬಗಳು, ಛಾವಣಿ ಮತ್ತು ದ್ವಾರಬಂಧಗಳಂತಹ ಕೆತ್ತನೆಗಳಿಂದ ಕೂಡಿದ್ದು ಆಕರ್ಷಕವಾಗಿದೆ

3 / 5
ಬೆಂಗಳೂರಿನ  ಭುವನೇಶ್ವರಿ ದೇವಸ್ಥಾನ : ಮಾಯಾನಗರಿ ಬೆಂಗಳೂರಿನಲ್ಲಿ ಹಲವೆಡೆ ಕನ್ನಡ ದೇವಿ ಭುವನೇಶ್ವರಿಯ ದೇವಾಲಯ ಹಾಗೂ ವೃತ್ತಗಳಿವೆ. ದೂಪನಹಳ್ಳಿಯ ಭುವನೇಶ್ವರಿಯ ಮೂರ್ತಿ, ಹೆಬ್ಬಾಳದ ಕೆಂಪಾಪುರ ಬಳಿ ಭುವನೇಶ್ವರಿ ಗುಡಿಯನ್ನು ಕಾಣಬಹುದು. ಇಂದಿರಾನಗರದ ಹತ್ತಿರದ ದೂಪನಹಳ್ಳಿಯಲ್ಲಿ 1991ರಲ್ಲಿ ಭುವನೇಶ್ವರಿ ದೇವಿ ದೇವಸ್ಥಾನವು ನಿರ್ಮಾಣ ಮಾಡಲಾಗಿದ್ದು, ಈ ದೇಗುಲದ ಸುತ್ತಲೂ ಶಿಲಾಕೆತ್ತನೆಯಿಂದ ಕೂಡಿದ್ದು ಆಕರ್ಷಕವಾಗಿದೆ.

4 / 5
ಸಿದ್ಧಾಪುರದ ಭುವನೇಶ್ವರಿ ದೇವಾಲಯ : ತಾಯಿ ಕನ್ನಡಾಂಬೆಗೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿ ಬಳಿ ದೇವಾಲಯ ಇದೆ. ಇದು ಕದಂಬರ ಕಾಲದ ದೇವಾಲಯವಾಗಿದ್ದು, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕದಂಬರು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಿದ್ದಾಪುರ ಆಳುವ ಸಂದರ್ಭದ ಕಾಲದಲ್ಲಿ ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ತಮ್ಮ ಕುಲದೇವಿಯನ್ನಾಗಿ ಆರಾಧಿಸುತ್ತಿದ್ದರು. ಆದರೆ ಈ ದೇವಾಲಯದ  ಪುನರ್ ನಿರ್ಮಾಣಗೊಳಿಸಿದ್ದು ಬಿಳಗಿ ಅರಸರು ಎನ್ನಲಾಗಿದೆ. ಕನ್ನಡಮ್ಮನಿಗೆ ಇಂದಿಗೂ ಇಲ್ಲಿ ತ್ರಿಕಾಲ ಪೂಜೆಗಳು ನಡೆಯುತ್ತವೆ.

5 / 5

Published On - 6:16 pm, Thu, 31 October 24

Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್