ನಟಿ ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಅವರು ನಟಿಸಿರುವ ‘ಮಿಷನ್ ಮಜ್ನು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಮೇಲೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಮಿಷನ್ ಮಜ್ನು’ ಚಿತ್ರಕ್ಕೆ ಸಿದ್ದಾರ್ಥ್ ಮಲ್ಹೋತ್ರಾ ಹೀರೋ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಗೆದ್ದರೆ ಬಾಲಿವುಡ್ನಲ್ಲಿ ಅವರಿಗೆ ಇರುವ ಡಿಮ್ಯಾಂಡ್ ಹೆಚ್ಚಾಗಲಿದೆ.
ಬಹುನಿರೀಕ್ಷಿತ ‘ಮಿಷನ್ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಪಾಕಿಸ್ತಾನಿ ಹುಡುಗಿ ಪಾತ್ರ ನೀಡಲಾಗಿದೆ. ಈ ಹಿಂದೆ ಅವರು ‘ಸೀತಾ ರಾಮಂ’ ಚಿತ್ರದಲ್ಲೂ ಪಾಕಿಸ್ತಾನಿ ಯುವತಿಯಾಗಿ ನಟಿಸಿದ್ದರು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಮಿಷನ್ ಮಜ್ನು’ ಸಿನಿಮಾ ದೊಡ್ಡ ಪರದೆಯಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಜನವರಿ 20ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಶುರುವಾಗಲಿದೆ.
ನೈಜ ಘಟನೆಗಳನ್ನು ಆಧರಿಸಿ ‘ಮಿಷನ್ ಮಜ್ನು’ ಚಿತ್ರ ಸಜ್ಜಾಗಿದೆ. ಆ ಕಾರಣದಿಂದಲೂ ಈ ಚಿತ್ರದ ಮೇಲಿನ ಹೈಪ್ ಹೆಚ್ಚಿದೆ. ರಶ್ಮಿಕಾ ಮಂದಣ್ಣ ಮತ್ತು ಸಿದ್ದಾರ್ಥ ಮಲ್ಹೋತ್ರ ನಡುವಿನ ಕೆಮಿಸ್ಟ್ರೀ ನೋಡಲು ಫ್ಯಾನ್ಸ್ ಕಾದಿದ್ದಾರೆ.