
ಬಹುಭಾಷಾ ನಟಿ ರೆಬಾ ಮೋನಿಕಾ ಜಾನ್ ಜನವರಿ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಚರ್ಚ್ ಒಂದರಲ್ಲಿ ಅವರು ತಮ್ಮ ದೀರ್ಘಕಾಲದ ಗೆಳೆಯ ಜೋಮೋನ್ ಅವರನ್ನು ವರಿಸಿದ್ದಾರೆ.

ರೆಬಾ- ಜೋಮೋನ್ ಅವರ ವಿವಾಹದ ಚಿತ್ರಗಳು ವೈರಲ್ ಆಗಿದ್ದು, ಚಿತ್ರರಂಗ ಹಾಗೂ ಅಭಿಮಾನಿಗಳು ಅವರಿಗೆ ಶುಭಕೋರಿದ್ದಾರೆ.

ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಸ್ನೇಹಿತರೊಂದಿಗೆ ರೆಬಾ.

ರೆಬಾ ಹಾಗೂ ಜೋಮೋನ್ ತಮ್ಮ ಆಪ್ತರೊಂದಿಗೆ ಪೋಸ್ ನೀಡಿದ್ದು ಹೀಗೆ.

ರೆಬಾ ಮೋನಿಕಾ ಜಾನ್ ಹಾಗೂ ಜೋಮೋನ್ ಫೋಟೋಗೆ ಮಸ್ತ್ ಪೋಸ್

ಕೇರಳ ಮೂಲದವರಾದರೂ ರೆಬಾ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಇದೀಗ ಬೆಂಗಳೂರಿನಲ್ಲಿಯೇ ಅವರು ವಿವಾಹವಾಗಿದ್ದಾರೆ.