
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ ನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದ ಹಸಿ ಮಾವು ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೇಸಿಗೆಯಲ್ಲಿ ನಿಯಮಿತವಾಗಿ ಹಸಿ ಮಾವು ಸೇವಿಸುವುದರಿಂದ ದೇಹದ ರೋಧನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಇದು ಶೀತ, ಕೆಮ್ಮು ಮತ್ತು ಸೋಂಕಿನಂತಹ ಸಮಸ್ಯೆಗಳಿಂದಲೂ ರಕ್ಷಿಸುತ್ತದೆ.

ಶಾಖದ ಹೊಡೆತದಿಂದ ರಕ್ಷಣೆ: ಬೇಸಿಗೆಯಲ್ಲಿ ಶಾಖದ ಹೊಡೆತ ಕೂಡಾ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಸಾಕಷ್ಟು ನೀರನ್ನು ಕುಡಿಯುವುದರ ಜೊತೆಗೆ ದೇಹವನ್ನು ತಂಪಾಗಿಡಲು ಸಹಾಯ ಮಾಡುವ ಆಹಾರಗಳನ್ನು ಸೇವಿಸಬೇಕು. ಹಾಗಿರುವಾಗ ನೀವು ಹಸಿ ಮಾವನ್ನು ಸೇವನೆ ಮಾಡಬಹುದು. ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಇದರಲ್ಲಿರುವ ಎಲೆಕ್ಟ್ರೋಲೈಟ್ ಅಂಶಗಳು ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ: ಹಸಿ ಮಾವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಫೈಬರ್ ಮತ್ತು ಪೆಕ್ಟಿನ್, ನಾರಿನಾಂಶವನ್ನು ಹೊಂದಿದ್ದು, ಇದು ಮಲಬದ್ಧತೆ, ಆಮ್ಲೀಯತೆ ಮತ್ತು ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. ಉಪ್ಪು ಮತ್ತು ಮೆಣಸಿನ ಪುಡಿಯೊಂದಿಗೆ ಹಸಿ ಮಾವನ್ನು ಸೇವನೆ ಮಾಡುವ ಮೂಲಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವೇಗಗೊಳಿಸಬಹುದು.

ಮೂಳೆಗಳನ್ನು ಬಲಪಡಿಸಲು ಸಹಕಾರಿ: ಹಸಿ ಮಾವು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದ್ದು, ಇದು ಮೂಳೆ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ನೀವು ಹಸಿ ಮಾವು ಸೇವಿಸಿದರೆ, ನಿಮ್ಮ ಮೂಳೆಗಳು ಬಲಗೊಳ್ಳುತ್ತವೆ. ಇದರಲ್ಲಿರುವ ಪೊಟ್ಯಾಸಿಯಂ ಹೃದಯದ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಲ್ಲದೆ ಇದು ತೂಕ ಇಳಿಕೆಗೂ ಸಹಕಾರಿಯಾಗಿದೆ.

ಜಲಸಂಚಯನ: ಈ ಬೇಸಿಗೆಯ ಸುಡುವ ಶಾಖದಲ್ಲಿ, ದೇಹವನ್ನು ಹೈಡ್ರೇಟ್ ಆಗಿರಿಸುವುದು ತುಂಬಾನೇ ಮುಖ್ಯ. ಹಾಗಿರುವಾಗ ನೀವು ಹಸಿ ಮಾವನ್ನು ಸೇವನೆ ಮಾಡಬಹುದು. ಇದರಲ್ಲಿ ಸಾಕಷ್ಟು ನೀರಿನಾಂಶವಿದ್ದು, ಇದು ದೇಹವನ್ನು ಉಲ್ಲಾಸಕರ ಮತ್ತು ಹೈಡ್ರೇಟಿಂಗ್ ಆಗಿಡಲು ಸಹಾಯ ಮಾಡುತ್ತದೆ. ಹುಳಿ ಇರುವ ಕಾರಣ ಮಾವಿನ ಕಾಯಿಯನ್ನು ಹಾಗೆಯೇ ತಿನ್ನಲು ಇಷ್ಟವಿಲ್ಲದಿದ್ದರೆ, ಆಮ್ ಪನ್ನಾ, ಮಾವಿನಕಾಯಿ ಚಟ್ನಿ, ಸ್ಮೂಥಿ, ಸಲಾಡ್ ತಯಾರಿಸಿ ಈ ರೂಪದಲ್ಲೂ ಮಾವಿನಕಾಯಿ ಸೇವಿಸಬಹುದು.