ಪ್ರತಿನಿತ್ಯ ಅಡುಗೆಗೆ ಒಂದಲ್ಲಾ ಒಂದು ರೀತಿಯಲ್ಲಿ ಈರುಳ್ಳಿಯನ್ನು ಬಳಸಿಯೇ ಬಳಸುತ್ತೇವೆ. ಇವು ಅಡುಗೆಗೆ ರುಚಿ ನೀಡುವುದಲ್ಲದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಪದಾರ್ಥಗಳಲ್ಲಿ ಬಳಕೆ ಮಾಡುವಾಗ, ಈರುಳ್ಳಿಯನ್ನು ಬೇಯಿಸಿ ಅಥವಾ ಹುರಿದು ಆ ಬಳಿಕ ಅಡುಗೆಯಲ್ಲಿ ಬಳಕೆ ಮಾಡುತ್ತೇವೆ. ಆದರೆ ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಹಸಿ ಈರುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ಅಥವಾ ಪ್ರಿ- ಡಯಾಬಿಟಿಸ್ ಕಡಿಮೆ ಮಾಡಲು ಈರುಳ್ಳಿಯನ್ನು ಪ್ರತಿದಿನ ಸೇವಿಸಬಹುದು. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹಸಿ ಈರುಳ್ಳಿಯಲ್ಲಿರುವ ಪ್ರಬಲ ಆಂಟಿ- ಆಕ್ಸಿಡೆಂಟ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಲ್ಲದೆ ಇದು ಫ್ಲೇವನಾಯ್ಡ್ ಎಂಬ ಉತ್ಕರ್ಷಣ ನಿರೋಧಕವನ್ನು ಸಹ ಹೊಂದಿದ್ದು ಇದು ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ.
ಹಸಿ ಈರುಳ್ಳಿಯಲ್ಲಿ ಇತರ ಪೋಷಕಾಂಶಗಳ ಜೊತೆಗೆ ಫೈಬರ್ ಕೂಡ ಸಮೃದ್ಧವಾಗಿದೆ. ಈರುಳ್ಳಿ ಕರುಳಿನ ಆರೋಗ್ಯಕ್ಕೆ ಅಗತ್ಯವಿರುವ ಫೈಬರ್ ಮತ್ತು ಪ್ರಿಬಯಾಟಿಕ್ಗಳ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ.
ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಸಹಾಯಕವಾಗಿದೆ. ಈರುಳ್ಳಿಯನ್ನು ಹಸಿಯಾಗಿ ತಿನ್ನುವುದು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.