ಪ್ರತಿಯೊಬ್ಬರೂ ಕೂಡ ಹೊಟ್ಟೆ ತೆಳ್ಳಗೆ ಮಾಡಿಕೊಂಡು ಫಿಟ್ ಆಗಿ ಕಾಣಲು ಇಷ್ಟಪಡುತ್ತಾರೆ. ಕೆಲವರು ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ.
ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಹೊಟ್ಟೆ ಸಣ್ಣ ಆಗುವುದಿಲ್ಲ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳು ಕೂಡ ಕಾರಣವಾಗುತ್ತದೆ ಎಂದರೆ ನಂಬುತ್ತೀರಾ?
ಕೆಲವೊಮ್ಮೆ ನಮಗೆ ತಿಳಿದೋ, ತಿಳಿಯದೆಯೋ ಆಗುವ ತಪ್ಪುಗಳು ಹೊಟ್ಟೆ ತೆಳ್ಳಗಾಗದಿರಲು ಕಾರಣವಾಗಬಹುದು.
ಸಾಮಾನ್ಯವಾಗಿ ತಡವಾಗಿ ಊಟ ಮಾಡುವುದು ಅಥವಾ ಊಟ ಬಿಡುವುದು. ಆಹಾರದಲ್ಲಿ ಹೆಚ್ಚು ಸಕ್ಕರೆ ಮತ್ತು ಉಪ್ಪನ್ನು ತಿನ್ನುವುದು ಕೂಡ ಹೊಟ್ಟೆ ತೆಳ್ಳಗಾಗದಿರಲು ಕಾರಣವಾಗಬಹುದು.
ತುಂಬಾ ತಡವಾಗಿ ಮಲಗುವುದು. ಬೇಕರಿ ಆಹಾರಗಳು, ಸಕ್ಕರೆ ತಿಂಡಿಗಳು, ಡೀಪ್ ಫ್ರೈಡ್ ಆಹಾರಗಳ ಸೇವನೆಯೂ ಕೂಡ ಹೊಟ್ಟೆ ತೆಳ್ಳಗಾಗದಿರಲು ಕಾರಣವಾಗಬಹುದು.
ದೀರ್ಘಕಾಲ ಕೆಟ್ಟ ಭಂಗಿಯಲ್ಲಿ ಕುಳಿತುಕೊಳ್ಳುವುದು, ಕಾರ್ಬೊನೇಟೆಡ್ ಜ್ಯೂಸ್ ಗಳ ನಿಯಮಿತ ಸೇವನೆ ಕೂಡ ನಿಮ್ಮ ಹೊಟ್ಟೆ ತೆಳ್ಳಗಾಗುವುದನ್ನು ತಡೆಯಬಹುದು.
Published On - 9:31 am, Wed, 19 March 25