ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಸುಶಾಂತ್ ಸಾವಿನ ಬಳಿಕ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿದ್ದಾರೆ.
ಜೈಲಿಗೆ ಹೋಗಿ ಬಂದರು, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ರಿಯಾ ಚಕ್ರವರ್ತಿ ಯನ್ನು ರಾಕ್ಷಿಸಿಯಂತೆ ಬಿಂಬಿಸಿದವು.
ಸುಶಾಂತ್ ಮನೆಯವರು ಕೊಲೆಗಾರ್ತಿ ಪಟ್ಟ ಕಟ್ಟಿದರು. ಬಿಹಾರ ಪೊಲೀಸ್, ಸಿಬಿಐ, ಮುಂಬೈ ಪೊಲೀಸರ ತನಿಖೆ ಎದುರಿಸಿದರು.
ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿರುವ ರಿಯಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಖತರೋಂಕೆ ಖಿಲಾಡಿ ರಿಯಾಲಿಟಿ ಶೋನ ಜಡ್ಜ್ ಸಹ ಆಗಿದ್ದು, ಸ್ಪರ್ಧಿಗಳಲ್ಲಿ ಹುರುಪು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಆದರೆ ರಿಯಾ ಚಕ್ರವರ್ತಿಗೆ ಸಿನಿಮಾ ಅವಕಾಶ ಅರಸಿ ಬಂದಿರಲಿಲ್ಲ, ಅವರು ನಟಿಸಿದ್ದ 'ಚೆಹರಾ' ಸಿನಿಮಾ 2021 ರಲ್ಲಿ ಬಿಡುಗಡೆ ಆಗಿತ್ತು.