ಆರ್​​ಎಸ್​​ಎಸ್​​ ಶತಮಾನೋತ್ಸವದ ಸಂಭ್ರಮ: ಹಲವೆಡೆ ಆಕರ್ಷಕ ಪಥಸಂಚಲನ; ಇಲ್ಲಿವೆ ಫೋಟೋಸ್​​

Updated on: Oct 12, 2025 | 7:24 PM

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಮತ್ತು ವಿಜಯದಶಮಿ ಅಂಗವಾಗಿ ಕರ್ನಾಟಕದಾದ್ಯಂತ ಭವ್ಯ ಪಥಸಂಚಲನ ನಡೆಯಿತು. ನೂರು ವರ್ಷ ಪೂರೈಸಿದ ಸಂಘದ ಸಂಭ್ರಮ ಹಿನ್ನೆಲೆ ಬೆಂಗಳೂರಿ ಸೇರಿದಂತೆ ಹಲವು ನಗರಗಳಲ್ಲಿ ಸಾವಿರಾರು ಸ್ವಯಂಸೇವಕರು ಭಾಗಿಯಾಗಿದ್ದರು. ಗಣವೇಷಧಾರಿಗಳ ಆಕರ್ಷಕ ಪಥಸಂಚಲನದ ಫೋಟೋಸ್​ ಇಲ್ಲಿವೆ ನೋಡಿ.

1 / 10
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಶತಮಾನೋತ್ಸವದ ಸಂಭ್ರಮ ಜೋರಾಗಿದೆ. ನೂರು ವರ್ಷ ಪೂರೈಕೆ ಹಿನ್ನೆಲೆ ರಾಜ್ಯದೆಲ್ಲೆಡೆ ಆಕರ್ಷಕ ಪಥಸಂಚಲನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

2 / 10
ಬೆಂಗಳೂರಿನಲ್ಲಿ ಒಂದೇ ದಿನ ನೂರು ಸ್ಥಳದಲ್ಲಿ ಆರ್​ಎಸ್​​ಎಸ್​​​ ಪಥ ಸಂಚಲನ ಆಯೋಜನೆ ಮಾಡಲಾಗಿತ್ತು. ಅದರಂತೆ ಪದ್ಮನಾಭ ನಗರ, ಜಯ ನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಸೇರಿ ಬೆಂಗಳೂರಿನ 100 ಸ್ಥಳದಲ್ಲಿ ಆರ್​​ಎಸ್​ಎಸ್​​ ಕಾರ್ಯಕರ್ತರು ಪಥಸಂಚಲನ ಮಾಡಿದರು.

3 / 10
ಇನ್ನು ಪಥಸಂಚಲನದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿಸಿ ಮೋಹನ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಗೋಪಾಲಯ್ಯ, ಅಶ್ವಥ್ ನಾರಾಯಣ್‌ ಸೇರಿ ಬಿಜೆಪಿಯ ಹಲವು ನಾಯಕರು ಭಾಗಿಯಾಗಿದ್ದರು.

4 / 10
ಚಿತ್ರದುರ್ಗದ ರಂಗಯ್ಯನ ಬಾಗಿಲು ಬಳಿಯಿಂದ ಪಥಸಂಚಲನ ಆರಂಭಗೊಂಡು ನಗರದ ಮುಖ್ಯರಸ್ತೆಗಳಲ್ಲಿ ಪಥಸಂಚಲನ ಸಾಗಿತು. ನೂರಾರು ಸ್ವಯಂಸೇವಕರು ಭಾಗಿಯಾಗಿದ್ದರು.

5 / 10
ಶಿವಮೊಗ್ಗದಲ್ಲಿ ಸಂಘಕ್ಕೆ ಶತಮಾನೋತ್ಸವದ ಜೊತೆಗೆ ವಿಜಯದಶಮಿ ಪ್ರಯುಕ್ತ ಪಥಸಂಚಲನ ನಡೆಯಿತು. ನಗರದ ವಿವಿಧ 38 ಶಾಖೆಗಳಿಂದ ಸ್ವಯಂ ಸೇವಕರು ಭಾಗವಹಿಸಿದ್ದರು.

6 / 10
ಗದಗಿನಲ್ಲೂ ಸಂಘಕ್ಕೆ 100 ವರ್ಷ ಮತ್ತು ವಿಜಯದಶಮಿ ಅಂಗವಾಗಿ ಆರ್​ಎಸ್​ಎಸ್​​ ಪಥಸಂಚಲನ ನಡೆಯಿತು. 1500 ಹೆಚ್ಚು ಗಣವೇಷಧಾರಿಗಳು ಭಾಗಿಯಾಗಿದ್ದರು. ಈ ವೇಳೆ ಆರ್​ಎಸ್ಎಸ್ ವೇಷಭೂಷಣ ತೊಟ್ಟು ಪುಟಾಣಿಗಳು ಗಮನ ಸೆಳೆದರು.

7 / 10
ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಬಾಲಕ ಗಣವೇಷಧಾರಿಗಳ ಪಥಸಂಚಲನ ನಡೆಯಿತು. ಇಂಜಿನಿಯರಿಂಗ್ ಕಾಲೇಜು ವೃತ್ತದಿಂದ ಆರಂಭಗೊಂಡ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

8 / 10
ಧಾರವಾಡದಲ್ಲಿ ನಡೆದ ಪಥಸಂಚಲನದಲ್ಲಿ 6 ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು ಭಾಗಿಯಾಗಿದ್ದರು.

9 / 10
ಆರ್​ಎಸ್​​ಎಸ್​​​ ಪಥಸಂಚಲನ ಹಿನ್ನೆಲೆ ಮಾರ್ಗದುದ್ದಕ್ಕೂ ಬಣ್ಣಬಣ್ಣದ ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು.  ಪುಷ್ಪವೃಷ್ಠಿ ಮಾಡಿ ಭವ್ಯ ಸ್ವಾಗತ ಕೋರಿದರು.

10 / 10
ಇನ್ನು ಈ ವೇಳೆ ಪಥಸಂಚಲನಕ್ಕೆ ಎಲ್ಲೆಡೆ ಭಾರೀ ಪೊಲೀಸ್ ಬಂದೋ ಬಸ್ತ್‌ಗೆ ವ್ಯವಸ್ಥೆ ಮಾಡಲಾಗಿತ್ತು.

Published On - 7:24 pm, Sun, 12 October 25