- Kannada News Photo gallery Cricket photos ICC Women's World Cup 2025: India Smashes Record 330 Runs Against Australia
World Cup 2025: ಆಸೀಸ್ ವಿರುದ್ಧ ರನ್ ಮಳೆ ಹರಿಸಿದ ಟೀಂ ಇಂಡಿಯಾ, ಹೊಸ ದಾಖಲೆ ಸೃಷ್ಟಿ
India Women's Cricket History: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂನಲ್ಲಿ ಇತಿಹಾಸ ನಿರ್ಮಿಸಿದೆ. 48.5 ಓವರ್‌ಗಳಲ್ಲಿ 330 ರನ್ ಗಳಿಸುವ ಮೂಲಕ, ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಅತ್ಯಧಿಕ ಮೊತ್ತದ ಹೊಸ ದಾಖಲೆ ಬರೆದಿದೆ. ಇದು 2022ರ ವೆಸ್ಟ್ ಇಂಡೀಸ್ ವಿರುದ್ಧದ 317 ರನ್ ದಾಖಲೆಯನ್ನು ಮುರಿದಿದೆ. ಆಸ್ಟ್ರೇಲಿಯಾ ವಿರುದ್ಧ 300+ ರನ್ ಗಳಿಸಿದ ಎರಡನೇ ಬಾರಿ ಇದು.
Updated on: Oct 12, 2025 | 9:00 PM

2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಿರುವ ಭಾರತ ತಂಡ ಇತಿಹಾಸ ನಿರ್ಮಿಸಿದೆ. ವಿಶಾಖಪಟ್ಟಣಂ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 48.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 330 ರನ್ ಕಲೆಹಾಕಿತು. ಇದು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅತ್ಯಧಿಕ ಸ್ಕೋರ್ ಆಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ ಈ ಹಿಂದೆ ಅಂದರೆ 2022 ರ ಏಕದಿನ ವಿಶ್ವಕಪ್‌ನಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಕಳೆದುಕೊಂಡು 317 ರನ್ ಕಲೆಹಾಕಿತ್ತು. ಅದು ಈವರೆಗಿನ ದಾಖಲೆಯಾಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧ 330 ರನ್ ಬಾರಿಸುವ ಮೂಲಕ ಭಾರತ ತಂಡ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ ಎರಡು ಬಾರಿ ಮಾತ್ರ 300 ಕ್ಕೂ ಹೆಚ್ಚು ಸ್ಕೋರ್ ದಾಖಲಾಗಿದೆ. ಭಾರತ ಎರಡೂ ಬಾರಿ ಈ ಸಾಧನೆ ಮಾಡಿದೆ. ಸೆಪ್ಟೆಂಬರ್ 2025 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 369 ರನ್ ಕಲೆಹಾಕಿತ್ತು. ಇದೀಗ ಏಕದಿನ ವಿಶ್ವಕಪ್‌ನಲ್ಲಿ 330 ರನ್ ಪೇರಿಸಿದೆ.

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅತ್ಯಧಿಕ ಮೊತ್ತದ ಪಟ್ಟಿಯನ್ನು ನೋಡುವುದಾದರೆ.. ಇದೀಗ ಆಸ್ಟ್ರೇಲಿಯಾ ವಿರುದ್ಧ 330 ರನ್ ಬಾರಿಸಿರುವ ಭಾರತ, 2022 ರಲ್ಲಿ ವಿಂಡೀಸ್ ವಿರುದ್ಧ 317 ರನ್ ಕಲೆಹಾಕಿತ್ತು. ಹಾಗೆಯೇ 2013 ರಲ್ಲಿ ವಿಂಡೀಸ್ ವಿರುದ್ಧ 284 ರನ್, 2022 ರಲ್ಲಿ ಇಂಗ್ಲೆಂಡ್ ವಿರುದ್ಧ 281 ರನ್ ಮತ್ತು ಅದೇ ವರ್ಷ ಆಸ್ಟ್ರೇಲಿಯಾ ವಿರುದ್ಧ 281 ರನ್ ಕಲೆಹಾಕಿತ್ತು.

ಇನ್ನು ಮಹಿಳಾ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ತಂಡಗಳ ಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿ ಭಾರತ ಮಹಿಳಾ ತಂಡವೇ ಸ್ಥಾನ ಪಡೆದಿದೆ. ಕೆಲವೇ ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ಭಾರತ 369 ರನ್ ಕಲೆಹಾಕಿತ್ತು. ಇದೀಗ ವಿಶ್ವಕಪ್‌ನಲ್ಲಿ 330 ರನ್ ಬಾರಿಸಿದೆ. 3ನೇ ಸ್ಥಾನದಲ್ಲಿರುವ ಇಂಗ್ಲೆಂಡ್ 298 ರನ್, ಮತ್ತೆ ನಾಲ್ಕನೇ ಸ್ಥಾನದಲ್ಲಿರುವ ಭಾರತ 292 ರನ್ ಪೇರಿಸಿತ್ತು.
