‘ಕ್ರೇನ್ ಇಲ್ಲದೆ, ಕ್ರೇನ್ ಶಾಟ್ ತೆಗೆದಿದ್ದೆ’; ಹಳೆಯ ಘಟನೆ ನೆನಪಿಸಿಕೊಂಡ ಎಸ್. ನಾರಾಯಣ್
90ರ ದಶಕದಲ್ಲಿ ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಿರ್ದೇಶನಕ್ಕೆ ಇಳಿಯಬೇಕು ಎಂದರೆ ಸಾಕಷ್ಟು ತೊಂದರೆಗಳು ಇರುತ್ತಿದ್ದವು. ಕ್ಯಾಮೆರಾ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಎಸ್. ನಾರಾಯಣ್ ಹೇಳಿಕೊಂಡಿದ್ದಾರೆ
ಎಸ್. ನಾರಾಯಣ್ (S. Narayan) ನಟನಾಗಿ, ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ (Sandalwood) ಗುರುತಿಸಿಕೊಂಡಿದ್ದಾರೆ. 1992ರಲ್ಲೇ ನಿರ್ದೇಶನಕ್ಕೆ ಇಳಿದ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದರು. ನಂತರ ಹೀರೋ ಆಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಈಗ ಧಾರಾವಾಹಿಗಳಲ್ಲೂ ಅವರು ನಟಿಸುತ್ತಿದ್ದಾರೆ. 90ರ ದಶಕದಲ್ಲಿ ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಿರ್ದೇಶನಕ್ಕೆ ಇಳಿಯಬೇಕು ಎಂದರೆ ಸಾಕಷ್ಟು ತೊಂದರೆಗಳು ಇರುತ್ತಿದ್ದವು. ಕ್ಯಾಮೆರಾ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಎಸ್. ನಾರಾಯಣ್ ಹೇಳಿಕೊಂಡಿದ್ದಾರೆ. ‘ಅದು ನನ್ನ ಮೊದಲ ಸಿನಿಮಾ. ನಾನು ಕಥೆ ಬರೆಯುವಾಗಲೇ ಒಂದು ದೃಶ್ಯಕ್ಕೆ ಕ್ರೇನ್ ಶಾಟ್ ತೆಗೆಯಬೇಕು ಎಂದುಕೊಂಡಿದ್ದೆ. ಆದರೆ, ನಿರ್ಮಾಪಕರು ಹಣ ಇಲ್ಲ ಎಂದರು. ಕ್ರೇನ್ ಇಲ್ಲದೆ, ಕ್ರೇನ್ ಶಾಟ್ ತೆಗೆದೆ’ ಎಂದರು ನಾರಾಯಣ್. ಆ ಶಾಟ್ ಹೇಗೆ ತೆಗೆದೆ ಎನ್ನುವುದನ್ನು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ‘ಒಬ್ಬರಾದ ಮೇಲೆ ಒಬ್ಬರು ಹೋಗುತ್ತಿದ್ದಾರೆ’; ರಾಜೇಶ್ ನಿಧನಕ್ಕೆ ಕಂಬನಿ ಮಿಡಿದ ಎಸ್. ನಾರಾಯಣ್