
ಬಹುಭಾಷಾ ನಟಿ ಸಾಯಿ ಪಲ್ಲವಿಗೆ ದಕ್ಷಿಣ ಭಾರತದಲ್ಲಿ ಅಭಿಮಾನಿ ಬಳಗ ಹೆಚ್ಚಿದೆ.

ಮೊದಲಿಗೆ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ಸಾಯಿ ಪಲ್ಲವಿ, ನಾಯಕಿಯಾಗಿದ್ದು ಮಲಯಾಳಂನ ‘ಪ್ರೇಮಂ’ ಮೂಲಕ. ಇದು ಬಹುದೊಡ್ಡ ಯಶಸ್ಸು ಗಳಿಸಿತು.

ಅಲ್ಲಿಂದ ನಟಿ ಹಿಂದಿರುಗಿ ನೋಡಿದ್ದೇ ಇಲ್ಲ. ತಮಿಳು ಹಾಗೂ ತೆಲುಗಿನಲ್ಲೂ ಸಾಯಿ ಪಲ್ಲವಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು.

ಆದರೆ ಇದೀಗ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅರ್ಥಾತ್ ಯಾವುದೇ ಹೊಸ ಚಿತ್ರಗಳನ್ನು ನಟಿ ಒಪ್ಪಿಕೊಂಡಿಲ್ಲ.

ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ಬಿಡುಗಡೆಗೆ ಸಿದ್ಧವಾಗಿದೆ.

2021ರಲ್ಲಿ ‘ಲವ್ ಸ್ಟೋರಿ’ ಹಾಗೂ ‘ಶ್ಯಾಮ್ ಸಿಂಗಾ ರಾಯ್’ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದರು. ಎರಡೂ ಚಿತ್ರಗಳಲ್ಲಿ ಅವರ ಪಾತ್ರ ಗಮನ ಸೆಳೆದಿತ್ತು.

ಪ್ರಸ್ತುತ ನಟಿ ಅಧಿಕೃತವಾಗಿ ಬ್ರೇಕ್ ಘೋಷಿಸದೇ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದೇ ಇರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
Published On - 9:18 pm, Fri, 11 March 22