1.4 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ

Updated on: Aug 29, 2024 | 10:03 PM

ಬರೋಬ್ಬರಿ 1.4 ಕೋಟಿ ರೂಪಾಯಿ ಬೆಲೆ ರೇಂಜ್ ರೋವರ್​ ಕಾರನ್ನು ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಅವರು ಖರೀದಿ ಮಾಡಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸಲ್ಮಾನ್​ ಖಾನ್​ ಜೊತೆಯಲ್ಲಿ ಶೇರಾ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೊಡ್ಡ ಮೊತ್ತದ ಸಂಬಳ ಸಿಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಶೇರಾ ಫೇಮಸ್​ ಆಗಿದ್ದಾರೆ.

1 / 5
ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಅವರ ಮನೆಗೆ ಹೊಸ ಕಾರು ಬಂದಿದೆ. ಈ ಖುಷಿಯನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐಷಾರಾಮಿಯಾದ ಈ ಹೊಸ ಕಾರಿನ ಎದುರು ಪೋಸ್​ ನೀಡಿದ್ದಾರೆ. ಈ ಫೋಟೋ ವೈರಲ್​ ಆಗಿದೆ.

ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಅವರ ಮನೆಗೆ ಹೊಸ ಕಾರು ಬಂದಿದೆ. ಈ ಖುಷಿಯನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐಷಾರಾಮಿಯಾದ ಈ ಹೊಸ ಕಾರಿನ ಎದುರು ಪೋಸ್​ ನೀಡಿದ್ದಾರೆ. ಈ ಫೋಟೋ ವೈರಲ್​ ಆಗಿದೆ.

2 / 5

ಕಳೆದ 20 ವರ್ಷಗಳಿಂದ ಸಲ್ಮಾನ್​ ಖಾನ್​ಗೆ ಬಾಡಿಗಾರ್ಡ್​ ಆಗಿ ಶೇರಾ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಮಾಡುವುದಕ್ಕೂ ಮುನ್ನ ಅವರು ಬಾಡಿ ಬಿಲ್ಡಿಂಗ್​ನಲ್ಲಿ ಆಸಕ್ತಿ ಹೊಂದಿದ್ದರು. ಬಳಿಕ ಬಾಡಿಗಾರ್ಡ್​ ಆಗಿ ಕೋಟಿಗಟ್ಟಲೆ ದುಡಿಯಲು ಆರಂಭಿಸಿದರು.

3 / 5

ಪ್ರತಿ ತಿಂಗಳು ಶೇರಾಗೆ ಸಲ್ಮಾನ್​ ಖಾನ್​​ ಬರೋಬ್ಬರಿ 15 ಲಕ್ಷ ರೂಪಾಯಿ ಸಂಭಾವನೆ ನೀಡುತ್ತಾರೆ. ಈ ವಿಷಯ ಕೇಳಿ ಎಲ್ಲರಿಗೂ ಅಚ್ಚರಿ ಆಗುತ್ತದೆ. ಸಲ್ಮಾನ್​ ಖಾನ್​ ಯಾವುದೇ ಜನಜಂಗುಳಿಯಲ್ಲಿ ಇದ್ದರೂ ಅವರನ್ನು ರಕ್ಷಿಸುವ ಹೊಣೆ ಶೇರಾ ಅವರದ್ದು.

4 / 5

ಈಗಂತೂ ಸಲ್ಮಾನ್​ ಖಾನ್​ ಅವರಿಗೆ ಜೀವ ಬೆದರಿಕೆ ಇದೆ. ಅವರನ್ನು ಹತ್ಯೆ ಮಾಡುವುದಾಗಿ ಲಾರೆನ್ಸ್ ಬಿಷ್ಣೋಯ್​ ಗ್ಯಾಂಗ್​ನವರು ನೇರವಾಗಿ ಬೆದರಿಕೆ ಹಾಕಿದ್ದಾರೆ. ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಸಲ್ಮಾನ್​ ಖಾನ್​ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ.

5 / 5

ಬೇರೆಲ್ಲರೂ ಸಲ್ಮಾನ್​ ಖಾನ್​ ಅವರನ್ನು ಭಾಯ್​ ಎಂದು ಕರೆಯುತ್ತಾರೆ. ಆದರೆ ಶೇರಾ ಅವರು ‘ಮಾಲಿಕ್’ ಎಂದು ಕರೆಯುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಶೇರಾ ಅವರನ್ನು ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us