ಬಾಲಿವುಡ್ನ ಬೇಡಿಕೆಯ ನಟ ಸಲ್ಮಾನ್ ಖಾನ್ ಅವರು ಇಂದು (ಡಿಸೆಂಬರ್ 27) 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.
ಸಲ್ಮಾನ್ ಖಾನ್ ಅವರು ಡಿಸೆಂಬರ್ 26ರಂದು ಅದ್ದೂರಿಯಾಗಿ ಪಾರ್ಟಿ ಅರೇಂಜ್ ಮಾಡಿದ್ದರು. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಇದಕ್ಕೆ ಹಾಜರಿ ಹಾಕಿದ್ದರು.
80ರ ದಶಕದಲ್ಲಿ ಸಂಗೀತಾ ಬಿಜಲಾನಿ ಅವರನ್ನು ಸಲ್ಲು ಪ್ರೀತಿಸುತ್ತಿದ್ದರು. ಸುಮಾರು 10 ವರ್ಷಗಳ ಕಾಲ ಅವರು ಡೇಟಿಂಗ್ ಮಾಡುತ್ತಿದ್ದರು. ಇನ್ನೇನು ಮದುವೆ ಆಗಬೇಕು ಎಂಬಷ್ಟರಲ್ಲಿ ಅವರ ಸಂಬಂಧ ಮುರಿದು ಬಿತ್ತು.
ಸಂಗೀತಾ ಕೂಡ ಬರ್ತ್ಡೇ ಪಾರ್ಟಿಗೆ ಬಂದಿದ್ದರು. ಸಲ್ಮಾನ್ ಖಾನ್ ಅವರು ಸಂಗೀತಾ ಹಣೆಗೆ ಕಿಸ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಫ್ಯಾನ್ಸ್ ಈ ಫೋಟೋಗೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇವರಿಬ್ಬರೂ ಮದುವೆ ಆಗಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ.
Published On - 1:59 pm, Tue, 27 December 22