
ನಟಿ ಸಮಂತಾ ಅವರು 2023ರಲ್ಲಿ ರಿಲೀಸ್ ಆದ ‘ಖುಷಿ’ ಸಿನಿಮಾ ಬಳಿಕ ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ಈಗ ಅವರು ಹೊಸ ಸೀರಿಸ್ ಘೋಷಣೆ ಮಾಡಿದ್ದಾರೆ. ಇದರ ಶೂಟ್ಗೆ ಅವರು ಸೆಟ್ಗೂ ಮರಳಿದ್ದಾರೆ ಅನ್ನೋದು ವಿಶೇಷ.

ಸಮಂತಾ ಸದ್ಯ ‘ರಕ್ತ ಬ್ರಹ್ಮಾಂಡ’ ಹೆಸರಿನ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಈ ಸರಣಿ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಕಾಣಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸಂಬಂಧ ಸಮಂತಾ ಸೆಟ್ ಫೋಟೋ ಹಂಚಿಕೊಂಡಿದ್ದಾರೆ.

ನೋಟ್ಸ್ ಮೇಲೆ ಸಮಂತಾ ಎಂದು ಬರೆದಿದೆ. ಪಕ್ಕದಲ್ಲಿ ಕಾಫಿ ಕಪ್ ಇದೆ. ‘ಕನಸು ಕಾಣೋದು ನಿಲ್ಲಿಸಬೇಡಿ. ಹಲವು ತಿಂಗಳ ಬಳಿಕ ಸೆಟ್ಗೆ ಬರುತ್ತಿರುವುದು ಖುಷಿ ಇದೆ’ ಎಂದಿದ್ದಾರೆ ಸಮಂತಾ. ಅವರಿಗೆ ಎಲ್ಲರೂ ವಿಶ್ ತಿಳಿಸಿದ್ದಾರೆ.

ಈ ಸರಣಿಯನ್ನು ಸಮಂತಾ ಫೇವರಿಟ್ ನಿರ್ದೇಶಕರಾದ ರಾಜ್ ಹಾಗೂ ಡಿಕೆ ನಿರ್ಮಾಣ ಮಾಡುತ್ತಿದ್ದಾರೆ. ‘ತುಂಬಾಡ್’ ನಿರ್ದೇಶಕ ರಾಹಿ ಅನಿಲ್ ಡೈರೆಕ್ಟ್ ಮಾಡುತ್ತಿದ್ದಾರೆ. ಇದರಲ್ಲಿ ಆದಿತ್ಯ ರಾಯ್ ಕಪೂರ್, ವಮಿಕಾ ಗಬ್ಬಿ, ಅಲಿ ಫಜಲ್ ನಟಿಸುತ್ತಿದ್ದಾರೆ.

ಸಮಂತಾ ಅವರು ದೊಡ್ಡ ಮಟ್ಟದ ಬೇಡಿಕೆ ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಅವರು ಸಿನಿಮಾ ರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ.
Published On - 10:27 am, Fri, 20 September 24