
ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಸಿನಿಮಾಗಳ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದಾರೆ.

ಸಮಂತಾ ಮಹಿಳಾ ಸ್ವಾವಲಂಬನೆ, ಆರೋಗ್ಯ ಇನ್ನೂ ಕೆಲವು ಸಾಮಾಜಿಕ ವಿಷಯಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಎನ್ಜಿಯೋಗಳ ಜೊತೆಗೂ ಸಹ ಕೈ ಜೋಡಿಸಿದ್ದಾರೆ.

ಇದೀಗ ನಟಿ ಸಮಂತಾ ಋತ್ ಪ್ರಭು ಒಂದು ಉತ್ತಮ ಕಾರ್ಯ ಮಾಡಿದ್ದಾರೆ. ಕುಟುಂಬಗಳು ಇಲ್ಲದ, ಅನಾಥ ಮಕ್ಕಳೊಡನೆ ದೀಪಾವಳಿ ಆಚರಿಸಿ ಅವರ ಮುಖದಲ್ಲಿ ನಗು ಮೂಡಲು ಕಾರಣರಾಗಿದ್ದಾರೆ.

ನಟಿ ಸಮಂತಾ ಅವರು ಕೆಲವು ಎನ್ಜಿಓಗಳ ಜೊತೆಗೂಡಿ ಈ ಸುಂದರ ಕಾರ್ಯದ ಭಾಗಿ ಆಗಿದ್ದಾರೆ. ಮಕ್ಕಳೊಡಗೆ ಆಟವಾಡಿ, ಡ್ಯಾನ್ಸ್ ಮಾಡಿ, ದೀಪಗಳ ಬೆಳಗಿ ಹಬ್ಬ ಆಚರಣೆ ಮಾಡಿದ್ದಾರೆ.

ಸ್ಪೂರ್ತಿ ಫೌಂಡೇಶನ್, ಹ್ಯಾಪಿ ಹೋಮ್ಸ್ ಮತ್ತು ಡಿಸೈರ್ ಸೊಸೈಟಿ ಹೆಸರಿನ ಎನ್ಜಿಯೋಗಳು ಒಟ್ಟಿಗೆ ಸೇರಿ ಈ ಅದ್ಭುತ ಕಾರ್ಯವನ್ನು ಹೈದರಾಬಾದ್ನಲ್ಲಿ ಆಯೋಜನೆ ಮಾಡಿದ್ದವು.

ನಟಿ ಸಮಂತಾ ಋತ್ ಪ್ರಭು ಅವರು ಹಲವಾರು ವರ್ಷಗಳಿಂದಲೂ ಈ ಎನ್ಜಿಯೋಗಳ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತಿದ್ದು ಮಕ್ಕಳೊಟ್ಟಿಗೆ ಸಮಯ ಕಳೆಯುತ್ತಾರೆ.