
ನಟಿ ಸಮಂತಾ ಅವರು ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ನಾಯಕ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

‘ಖುಷಿ’ ಸಿನಿಮಾದಲ್ಲಿ ಸಮಂತಾ ಮುಸ್ಲಿಂ ಯುವತಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿದೆ.

‘ಖುಷಿ’ ಸಿನಿಮಾದ ಶೂಟಿಂಗ್ ದಿನಗಳನ್ನು ಸಮಂತಾ ನೆನಪಿಸಿಕೊಂಡಿದ್ದಾರೆ. ಕಾಡು, ಗುಡ್ಡ-ಬೆಟ್ಟಗಳ ಫೋಟೋನ ಅವರು ಶೇರ್ ಮಾಡಿಕೊಂಡಿದ್ದಾರೆ.

ಸಮಂತಾಗೆ ಅನಾರೋಗ್ಯ ಕಾಡಿದ್ದರಿಂದ ‘ಖುಷಿ’ ಸಿನಿಮಾ ಕೆಲಸಗಳು ವಿಳಂಬ ಆದವು. ಇತ್ತೀಚೆಗೆ ಅವರು ಸೆಟ್ಗೆ ಮರಳಿದ್ದಾರೆ.

‘ಸಿಟಾಡೆಲ್’ ಇಂಗ್ಲಿಷ್ ಸೀರಿಸ್ನ ಭಾರತದ ವರ್ಷನ್ನಲ್ಲಿ ಸಮತಾ ನಟಿಸುತ್ತಿದ್ದಾರೆ. ಸಮಂತಾ ಅವರು ಸ್ಪೈ ಪಾತ್ರ ಮಾಡುತ್ತಿದ್ದಾರೆ.