
ನಟ ಅಭಿಷೇಕ್ ಅಂಬರೀಷ್ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಮನಮೆಚ್ಚಿದ ಹುಡುಗಿ ಅಬಿವಾ ಬಿದ್ದಪ್ಪ ಜೊತೆ ಅವರ ಎಂಗೇಜ್ಮೆಂಟ್ ನಡೆದಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು (ಡಿ.11) ಬೆಳಗ್ಗೆ 9.30ಕ್ಕೆ ನಿಶ್ಚಿತಾರ್ಥ ನೆರವೇರಿದೆ. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನೆರವೇರಿದೆ.

ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ತುಂಬ ಅದ್ದೂರಿಯಾಗಿ ಎಂಗೇಜ್ಮೆಂಟ್ ನಡೆದಿದ್ದು, ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರು ಉಂಗುರ ಬದಲಾಯಿಸಿಕೊಂಡಿದ್ದಾರೆ.

ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಯಶ್, ಸಚಿವರಾದ ಆರ್. ಅಶೋಕ್, ಅಶ್ವತ್ಥ ನಾರಾಯಣ್, ಸುಧಾಕರ್ ಸೇರಿದಂತೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.

ಪುತ್ರನ ಎಂಗೇಜ್ಮೆಂಟ್ ಕುರಿತು ಸುಮಲತಾ ಅಂಬರೀಷ್ ಅವರು ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ಫೋಟೋ ಮತ್ತು ವಿಡಿಯೋಗಳು ಲಭ್ಯವಾಗಿವೆ. ಅಭಿಷೇಕ್ ಹಾಗೂ ಅವಿವಾಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

‘ರಾಕಿಂಗ್ ಸ್ಟಾರ್’ ಯಶ್ ಹಾಗು ರಾಧಿಕಾ ಪಂಡಿತ್ ಅವರು ಈ ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ಬ್ಯೂಟಿಪುಲ್ ಜೋಡಿಗೆ ಯಶ್ ಹಾಗೂ ರಾಧಿಕಾ ಶುಭ ಕೋರಿದ್ದಾರೆ.