
ಇಂದು (ಡಿ.04) ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಕೇವಲ ನಟನೆಯಲ್ಲಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಕಲಾವಿದರಾಗಿ ಕಿರುತೆರೆ, ಹಿರಿತೆರೆಯಲ್ಲಿ ಕೃಷಿ ಮಾಡಿದ್ದರು.

ನಟ ಶಿವರಾಂಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಹಲವು ಕಲಾಪ್ರಕಾರಗಳಲ್ಲಿ ಅವರ ಅಭಿರುಚಿ ಹೊಂದಿದ್ದರು.

ಫೋಟೋಗ್ರಫಿ ಎಸ್.ಶಿವರಾಂ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು.

ಇಲ್ಲಿ ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಹಲವು ಅಪರೂಪದ ಚಿತ್ರಗಳಿವೆ.

ಕ್ಯಾಮೆರಾದೊಂದಿಗೆ ಶಿವರಾಂ ಅವರ ಭಂಗಿ.

ಫ್ರೇಮ್ ಹೊಂದಿಸಿ ಛಾಯಾಚಿತ್ರ ತೆಗೆಯುತ್ತಿರುವ ನಟ ಶಿವರಾಂ.

ತಮ್ಮ ಛಾಯಾಗ್ರಾಹಕ ಗೆಳೆಯರೊಂದಿಗೆ ನಟ ಶಿವರಾಂ. ಹಿರಿಯ ಛಾಯಾಚಿತ್ರಗಾರ ಲೋಕೇಶ್ ಮೊಸಳೆ ಅವರೂ ಶಿವರಾಂ ಅವರೊಂದಿಗೆ ಚಿತ್ರದಲ್ಲಿ ಇರುವುದನ್ನು ಕಾಣಬಹುದು.