Updated on: Jul 04, 2023 | 10:38 AM
ನಟಿ ಸಂಗೀತಾ ಶೃಂಗೇರಿ ಅವರು ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಬಂದವರು. ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದರು. ಆ ಬಳಿಕ ಅವರು ಚಿತ್ರರಂಗಕ್ಕೆ ಬಂದರು.
2018ರಲ್ಲಿ ಸಂಗೀತಾ ಅವರು ದೊಡ್ಡ ಪರದೆಗೆ ಕಾಲಿಟ್ಟರು ‘ಎ+’ ಅವರ ಮೊದಲ ಸಿನಿಮಾ. ನಂತರ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದರು.
2022ರಲ್ಲಿ ರಿಲೀಸ್ ಆದ ‘777 ಚಾರ್ಲಿ’ ಸಿನಿಮಾ ಸಂಗೀತಾ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದೆ. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿದೆ.
ಸಂಗೀತಾ ಅವರು ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಹಂಚಿಕೊಂಡಿರುವ ಹೊಸ ಫೋಟೋ ಗಮನ ಸೆಳೆಯುತ್ತಿದೆ. ತಾವು ಎಷ್ಟು ಫಿಟ್ ಎಂಬುದನ್ನು ಸಾಬೀತು ಮಾಡಲು ಅವರು ಈ ಫೋಟೋ ಹಂಚಿಕೊಂಡಂತಿದೆ.
‘ಲಕ್ಕಿ ಮ್ಯಾನ್’ ಚಿತ್ರದಲ್ಲೂ ಸಂಗೀತಾ ನಟಿಸಿದ್ದರು. ಸದ್ಯ ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ.
ಸಂಗೀತಾ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.
ಸಂಗೀತಾ ಅವರ ತಂದೆ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಅನ್ನೋದು ವಿಶೇಷ.
Published On - 9:03 am, Tue, 4 July 23