ಬಾಳೆಹಣ್ಣು, ಪಪ್ಪಾಯಿ ಒಟ್ಟೊಟ್ಟಿಗೆ ಸೇವಿಸುವುದು ಆರೋಗ್ಯಕರವೇ? ತಜ್ಞರ ಸಲಹೆ ತಿಳಿಯಿರಿ
ಕೆಲ ಜನರು ಒಟ್ಟಿಗೆ ಅಥವಾ ಸಲಾಡ್ ರೂಪದಲ್ಲಿ ಹಣ್ಣುಗಳನ್ನು ತಿನ್ನಲು ಬಯಸುತ್ತಾರೆ. ಮತ್ತೆ ಕೆಲ ಜನರು ಬಾಳೆಹಣ್ಣು ಮತ್ತು ಪಪ್ಪಾಯಿ ಎರಡನ್ನು ಒಟ್ಟಿಗೆ ತಿನ್ನಲು ಇಷ್ಟಪಡುತ್ತಾರೆ. ಹೀಗೆ ಒಟ್ಟೊಟ್ಟಿಗೆ ತಿನ್ನುವುದಿರಿಂದಾಗುವ ಆರೋಗ್ಯ ಸಮಸ್ಯೆಗಳು ತಿಳಿಯಿರಿ.
Updated on: Jul 03, 2023 | 9:33 PM

ನಮ್ಮೆಲ್ಲರ ಆರೋಗ್ಯಕ್ಕೆ ಹಣ್ಣುಗಳು ಅಗತ್ಯ. ಅದಕ್ಕಾಗಿಯೇ ವೈದ್ಯರು ದಿನಕ್ಕೆ ಒಂದು ಹಣ್ಣು ತಿನ್ನುವಂತೆ ಸಲಹೆ ನೀಡುತ್ತಾರೆ. ಕೆಲ ಜನರು ಒಟ್ಟಿಗೆ ಅಥವಾ ಸಲಾಡ್ ರೂಪದಲ್ಲಿ ಹಣ್ಣುಗಳನ್ನು ತಿನ್ನಲು ಬಯಸುತ್ತಾರೆ. ಮತ್ತೆ ಕೆಲ ಜನರು ಬಾಳೆಹಣ್ಣು ಮತ್ತು ಪಪ್ಪಾಯಿ ಎರಡನ್ನು ಒಟ್ಟಿಗೆ ತಿನ್ನಲು ಇಷ್ಟಪಡುತ್ತಾರೆ. ಹೀಗೆ ಒಟ್ಟೊಟ್ಟಿಗೆ ತಿನ್ನುವುದಿರಿಂದಾಗುವ ಆರೋಗ್ಯ ಸಮಸ್ಯೆಗಳು ತಿಳಿಯಿರಿ.

ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬ ಪ್ರಶ್ನೆಗೆ ಉತ್ತರ ಅದು ನಮ್ಮ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ತಜ್ಞರು.

ಬಾಳೆಹಣ್ಣು ಮತ್ತು ಪಪ್ಪಾಯಿ ಎರಡು ಹಣ್ಣುಗಳು ವಿಭಿನ್ನ ಸ್ವಭಾವವನ್ನು ಹೊಂದಿರುವುದರಿಂದ ಒಟ್ಟಿಗೆ ಸೇವಿಸುವುದರಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಈ ರೀತಿ ತಿನ್ನದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿನ್ನುವುದರಿಂದ ವಾಂತಿ, ತಲೆನೋವು, ವಾಕರಿಕೆ, ಆಮ್ಲೀಯತೆ ಮತ್ತು ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಬಹುದು.

ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಪಪ್ಪಾಯಿಯನ್ನು ತಿನ್ನುವುದರಿಂದ ಉಲ್ಬಣಗೊಳ್ಳುವ ಸಾಧ್ಯತೆಯಿದೆ.



















