Updated on: Sep 22, 2023 | 8:58 PM
ನಟಿ ಸಾನ್ಯಾ ಐಯ್ಯರ್ ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರು, ಗೆಳೆಯರು ಹಾಗೂ ಚಿತ್ರತಂಡದೊಟ್ಟಿಗೆ ಆಚರಿಸಿಕೊಂಡಿದ್ದಾರೆ.
ಸಾನ್ಯಾ ಐಯ್ಯರ್ 'ಗೌರಿ' ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರತಂಡದವರು ಸಾನ್ಯಾಗೆ ಶುಭಾಶಯ ತಿಳಿಸಿದ್ದಾರೆ.
'ಗೌರಿ' ಸಿನಿಮಾದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಿನಿಮಾದ ನಾಯಕ ಸಮರ್ಜಿತ್ ಲಂಕೇಶ್ ಅವರು ಸಾನ್ಯಾಗೆ ಶುಭಾಶಯ ತಿಳಿಸಿದ್ದಾರೆ.
ಶುಭಾಶಯ ಕೋರಿದ ಇಂದ್ರಜಿತ್ ಲಂಕೇಶ್ ಹಾಗೂ ಸಮರ್ಜಿತ್ ಅವರೊಟ್ಟಿಗೆ ಚಿತ್ರಗಳನ್ನು ಸಾನ್ಯಾ ಹಂಚಿಕೊಂಡಿದ್ದಾರೆ.
ಬಾಲನಟಿಯಾಗಿ ನಟನೆ ಆರಂಭಿಸಿದ ಸಾನ್ಯಾ ಇದೀಗ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ.
ಸಾನ್ಯಾ ಇತ್ತೀಚೆಗೆ ಬಾಲಿವುಡ್ನ ಜನಪ್ರಿಯ ಫೋಟೊಗ್ರಾಫರ್ ಡಬು ರತಾನಿ ಅವರಿಂದ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
ತಮ್ಮ ಹಲವು ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಸಾನ್ಯಾ ಹಂಚಿಕೊಳ್ಳುತ್ತಿದ್ದಾರೆ.