‘ಬಿಗ್ ಬಾಸ್’ ಮನೆಗೆ ಹೋಗಿ ಬಂದ ನಂತರ ನಟಿ ಸಾನ್ಯಾ ಐಯ್ಯರ್ ಅವರ ಖ್ಯಾತಿ ಹೆಚ್ಚಿದೆ. ಹಲವು ಫೋಟೋಶೂಟ್ ಮಾಡಿಸಿ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೊಸ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.
ಸಾನ್ಯಾ ಐಯ್ಯರ್ ಅವರು ಬಾಲಿವುಡ್ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ.
ಸಾನ್ಯಾ ಐಯ್ಯರ್ ಅವರು ಈಗ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕರು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.
ಸಾನ್ಯಾ ಐಯ್ಯರ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ಅವರಿಗೆ ಸಂಸ್ಕೃತಿಯ ಪಾಠ ಹೇಳಲಾಗಿದೆ.
ಉರ್ಫಿ ಜಾವೇದ್ ಅವರು ಚಿತ್ರ ವಿಚಿತ್ರ ಬಟ್ಟೆ ಧರಿಸುತ್ತಾರೆ. ಹೀಗಾಗಿ, ಅನೇಕರು ಉರ್ಫಿಗೆ ಸಾನ್ಯಾ ಅವರನ್ನು ಹೋಲಿಕೆ ಮಾಡಿ ಟೀಕೆ ಮಾಡಿದ್ದಾರೆ.