
ಬಾಲಿವುಡ್ ತಾರೆ ಸಾರಾ ಅಲಿ ಖಾನ್ ಸದ್ಯ ‘ಅತರಂಗಿ ರೇ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದ ಸಂತಸದಲ್ಲಿದ್ದಾರೆ. ಡಿಸ್ನೆ+ ಹಾಟ್ಸ್ಟಾರ್ನಲ್ಲಿ ಚಿತ್ರ ತೆರೆಕಂಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಸಾರಾ ಸಖತ್ ಆಕ್ಟಿವ್. ಇನ್ಸ್ಟಾಗ್ರಾಂ ಒಂದರಲ್ಲೇ ಅವರಿಗೆ 3.8 ಕೋಟಿಗೂ ಅಧಿಕ ಜನ ಹಿಂಬಾಲಕರಿದ್ದಾರೆ.

ಸದಾ ಚಿತ್ರಗಳನ್ನು ಹಂಚಿಕೊಳ್ಳುವ ಸಾರಾ, ಇತ್ತೀಚೆಗೆ ತಾವು ಕಾಶ್ಮೀರ ಪ್ರವಾಸ ತೆರಳಿದ್ದಾಗ ತೆಗೆಸಿಕೊಂಡ ಚಿತ್ರಗಳನ್ನು ಮತ್ತೆ ಹಂಚಿಕೊಂಡಿದ್ದಾರೆ.

ಅದಕ್ಕೆ ಕ್ಯಾಪ್ಶನ್ ನೀಡಿರುವ ಸಾರಾ, ‘‘ಪರ್ವತಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’’ ಎಂದು ಬರೆದಿದ್ದಾರೆ. ಸೂರ್ಯನ ಕಿರಣಗಳನ್ನೂ ಕೂಡ ಎಂದು ಅವರು ಬರಹದಲ್ಲಿ ಸೇರಿಸಿದ್ದಾರೆ.

ಸಾರಾ ಸದ್ಯ ಬಾಲಿವುಡ್ನ ಬ್ಯುಸಿ ನಟಿಯರಲ್ಲೊಬ್ಬರು. ಪಟೌಡಿ ಕುಟುಂಬದ ಹಿನ್ನೆಲೆಯಿರುವ ಸಾರಾ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಈಗಾಗಲೇ ಹಲವು ಚಿತ್ರಗಳಿಗೆ ಸೈನ್ ಮಾಡಿರುವ ಸಾರಾ, ಪ್ರಸ್ತುತ ವಿಕ್ಕಿ ಕೌಶಲ್ ಜತೆ ತೆರೆಹಂಚಿಕೊಳ್ಳುತ್ತಿರುವ ಚಿತ್ರದ ಶೂಟಿಂಗ್ನಲ್ಲಿದ್ದಾರೆ.

ಸಾರಾ ಸ್ಕ್ರಿಪ್ಟ್ ವಿಚಾರದಲ್ಲಿ ಚ್ಯೂಸಿಯಾಗಿದ್ದು, 2022ರಲ್ಲಿ ಮತ್ತಷ್ಟು ಗೆಲುವಿಗಾಗಿ ಹಂಬಲಿಸುತ್ತಿದ್ದಾರೆ.