AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saturn Retrograde in Aquarius: ಕುಂಭದಲ್ಲಿ ವಕ್ರೀ ಶನಿಯಿಂದ ಮೇಷದಿಂದ ಮೀನದ ತನಕ ಯಾವ ರಾಶಿಗೆ ಏನು ಫಲ?

2024ನೇ ಇಸವಿಯ ಜೂನ್ 30ರಂದು ಶನಿ ಗ್ರಹ ಕುಂಭ ರಾಶಿಯಲ್ಲಿ ವಕ್ರೀ ಆಗುತ್ತದೆ. ನವೆಂಬರ್ 14ರ ತನಕ ಇದೇ ಸ್ಥಿತಿಯಲ್ಲಿ ಇರುತ್ತದೆ. ಯಾವುದೇ ಗ್ರಹ ವಕ್ರೀ ಆದಾಗ ಅದು ನೀಡುವ ಶುಭ ಫಲವೋ ಅಥವಾ ಅಶುಭ ಫಲವೋ ದುಪ್ಪಟ್ಟಾಗುತ್ತದೆ. ಕರ್ಕಾಟಕ, ತುಲಾ, ವೃಶ್ಚಿಕ, ಮಕರ, ಕುಂಭ, ಮೀನ- ಈ ಆರು ರಾಶಿಗಳವರು ಈ ಅವಧಿಯಲ್ಲಿ ಎಚ್ಚರವಾಗಿರಲೇಬೇಕು. ಒಟ್ಟಾರೆ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಮೇಲೆ ಆಗುವ ವಕ್ರೀ ಶನಿಯ ಪ್ರಭಾವ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಆಯೇಷಾ ಬಾನು
|

Updated on: Jun 27, 2024 | 7:27 AM

Share
ಮೇಷ: ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆ, ಆಭರಣ, ಸೈಟು, ಷೇರು, ಕೃಷಿ ಜಮೀನು, ವಾಹನ ಮೊದಲಾದವುಗಳ ಖರೀದಿ ಮಾಡುವ ಯೋಗ ಇದೆ. ನೀವು ನೀಡಿ, ವಾಪಸ್ ಬಾರದೆ ಇರುವಂಥ ಸಾಲ, ಕೆಲಸ ಮಾಡಿದ ನಂತರ ಬಾರದೆ ಉಳಿದ ಹಣ ಬರುತ್ತದೆ, ನಿಮ್ಮ ಶ್ರಮಕ್ಕೆ ತಕ್ಕಂತೆ ಬಡ್ತಿ, ವೇತನ ಹೆಚ್ಚಳ ಮೊದಲಾದ ಶುಭ ಫಲಗಳನ್ನು ನಿರೀಕ್ಷೆ ಮಾಡಬಹುದು.

1 / 13
ವೃಷಭ: ಉದ್ಯೋಗದಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ. ಇಷ್ಟು ಸಮಯ ನಿಮ್ಮ ಬೆಂಬಲಕ್ಕೆ ಬರುತ್ತಿದ್ದವರು ಇನ್ನು ಬರುವುದಿಲ್ಲ ಅಥವಾ ಅವರೇ ಕೆಲಸ ಬಿಡಬಹುದು ಅಥವಾ ನಿಮಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ನಿಮ್ಮಲ್ಲಿ ಕೆಲವರು ಕೆಲಸ ಬಿಡಬಹುದು. ನಿಮ್ಮ ತಪ್ಪಿನಿಂದ ಹಲವರ ನೆರವನ್ನು ಕಳೆದುಕೊಳ್ಳುತ್ತೀರಿ. ಮತ್ತೊಂದು ಕಡೆಗೆ ಕೆಲಸ ಸಿಗದ ಹೊರತು ಈಗಿರುವ ನಿಮ್ಮ ಉದ್ಯೋಗ ಬಿಡಬೇಡಿ.

2 / 13
ಮಿಥುನ: ನಿಮ್ಮ ತಂದೆಯವರು ಅಥವಾ ತಂದೆ ಸಮಾನರಾದವರ ಆರೋಗ್ಯ ಸ್ಥಿತಿಯಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಶತಾಯಗತಾಯ ಏರಿಕೆ ಆಗುತ್ತದೆ ಎಂಬ ಅತಿಯಾದ ವಿಶ್ವಾಸದಿಂದ ಹೂಡಿಕೆ ಮಾಡಿದ್ದ ಕೃಷಿ ಜಮೀನು- ಆಸ್ತಿ ವಿಚಾರದಲ್ಲಿ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುವಂಥ ಬೆಳವಣಿಗೆಗಳು ಆಗಲಿವೆ. ಅಳತೆ ಮೀರಿ ನೀವಾಗಿಯೇ ಮೈ ಮೇಲೆ ಹಾಕಿಕೊಂಡ ಜವಾಬ್ದಾರಿಗಳು ಹಣ್ಣುಗಾಯಿ- ನೀರುಗಾಯಿ ಮಾಡುತ್ತವೆ.

3 / 13
ಕರ್ಕಾಟಕ: ನಿಮ್ಮ ಆರೋಗ್ಯ ಪರಿಸ್ಥಿತಿಯ ಬಗ್ಗೆ ಲಕ್ಷ್ಯ ವಹಿಸಿ. ನಿಮ್ಮ ಮೇಲೆ ಗಂಭೀರವಾದ ಆರೋಪಗಳು ಎದುರಾಗಬಹುದು. ಮುಖ್ಯವಾಗಿ ನಿಮ್ಮ ನಡತೆ, ವರ್ತನೆ, ಗುಣ ಇವುಗಳ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಲಿವೆ. ನಿಮಗೂ ಏನು ಆಗುತ್ತಿದೆ ಎಂಬ ಅಂದಾಜು ಸಿಗದೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತೀರಿ. ನಿಮ್ಮಲ್ಲಿ ಕೆಲವರಿಗೆ ಗಂಭೀರ ಅಪಘಾತಗಳು, ಆತಂಕಕ್ಕೆ ಕಾರಣ ಆಗುವಂಥ ಆಪರೇಷನ್ ಗಳು ಆಗಬಹುದು.

4 / 13
ಸಿಂಹ: ಸಂಗಾತಿಯ ವರ್ತನೆ ನಿಮಗೆ ವಿಪರೀತ ಸಿಟ್ಟಾಗುವಂತೆ ಮಾಡಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿದ್ದಲ್ಲಿ ಬೇರೆ ಆಗುವ ಮಟ್ಟಕ್ಕೆ ಜಗಳ- ಕಲಹಗಳು ಏರ್ಪಡಲಿವೆ. ವಿದೇಶ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಕೊನೆ ಕ್ಷಣದಲ್ಲಿ ಆ ಪ್ರಯಾಣ ರದ್ದಾಗಬಹುದು. ಇತರರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ನಿಮ್ಮ ಕೈಯಿಂದಲೇ ಹಣ- ಮರ್ಯಾದೆ- ಗೌರವ ಕಳೆದುಕೊಳ್ಳುವ ಸಾಧ್ಯತೆ ವಿಪರೀತ ಹೆಚ್ಚಿದೆ.

5 / 13
ಕನ್ಯಾ: ಆದಾಯ ಮೂಲದಲ್ಲಿ ದಿಢೀರ್ ಏರಿಕೆ ಆಗಲಿದೆ. ಹಣ- ಉದ್ಯೋಗ ವಿಚಾರಕ್ಕೆ ಯಾರು ಇಷ್ಟು ಸಮಯ ನಿಮಗೆ ತೊಂದರೆ, ಕಿರುಕುಳ ನೀಡುತ್ತಿದ್ದರೋ ಅವರೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ನಿಮ್ಮಲ್ಲಿ ಕೆಲವರು ಸಾಲವನ್ನು ಮರುಪಾವತಿಸಿ, ಆ ಮೂಲಕ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ, ಭೂಮಿ ಅಥವಾ ವಾಹನ ಖರೀದಿಗೆ ಅಡ್ವಾನ್ಸ್ ನೀಡುವ ಯೋಗ ನಿಮ್ಮ ಪಾಲಿಗೆ ಇದೆ.

6 / 13
ತುಲಾ: ನಿಮ್ಮ ಮಗ ಅಥವಾ ಮಗಳು ದೊಡ್ಡ ದೊಡ್ಡ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳಲಿದ್ದು, ಇದರಿಂದ ನಿಮಗೆ ಮಾನಸಿಕವಾಗಿ ಹಿಂಸೆ ಹಾಗೂ ಜೊತೆಗೆ ಅವಮಾನ ಸಹ ಆಗಬಹುದು. ಸ್ವತಃ ನಿಮಗೆ ಜಠರ, ದೊಡ್ಡ ಕರುಳು- ಸಣ್ಣ ಕರುಳಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ಇತರರಿಗೆ ಜಾಮೀನಾಗಿ ನಿಂತು ಕೊಡಿಸಿದ ಸಾಲವನ್ನು ಕೊನೆಗೆ ನೀವು ಕೈಯಿಂದ ಕಟ್ಟಿ ಕೊಡಬೇಕಾಗುತ್ತದೆ.

7 / 13
ವೃಶ್ಚಿಕ:  ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರ ಅನಾರೋಗ್ಯ ಸಮಸ್ಯೆಗಳು ನಿಮಗೆ ಚಿಂತೆ ತರಲಿದೆ ಹಾಗೂ ಭಾರೀ ಮೊತ್ತದ ಖರ್ಚನ್ನು ತಂದೊಡ್ಡುತ್ತವೆ. ಮನೆಯ ದುರಸ್ತಿ ಮಾಡಿಸುತ್ತಿರುವವರಿಗೆ ನೀವು ಹಾಕಿಕೊಂಡಿದ್ದ ಬಜೆಟ್ ಅನ್ನು ಮೀರಿ ಖರ್ಚಾಗುತ್ತದೆ. ಮಾತಿನ ಮೂಲಕ ಸಮಸ್ಯೆ ಮಾಡಿಕೊಳ್ಳುತ್ತೀರಿ. ಆಸ್ತಿ ವ್ಯಾಜ್ಯ ಆಗಲಿದೆ. ವಾಹನ ಕಳೆದುಹೋಗಬಹುದು ಅಥವಾ ದುರಸ್ತಿ ಮಾಡಿಸಲಾಗದ ಮಟ್ಟಕ್ಕೆ ಹಾಳಾಗಬಹುದು.

8 / 13
ಧನುಸ್ಸು: ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಲಿವೆ. ಸೋದರ- ಸೋದರಿಯರ ಜತೆಗೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಬಾಡಿಗೆ ಆದಾಯ ಮಾಡಿಕೊಳ್ಳಬೇಕು ಅಥವಾ ಹೆಚ್ಚು ಮಾಡಿಕೊಳ್ಳಬೇಕು ಎಂದಿದ್ದಲ್ಲಿ ಅದು ಸಾಧ್ಯವಾಗಲಿದೆ. ಸ್ವಂತ ವ್ಯವಹಾರ- ವೃತ್ತಿ ಮಾಡುತ್ತಿರುವವರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಧೈರ್ಯದಿಂದ ನೀವು ತೆಗೆದುಕೊಂಡ ನಿರ್ಧಾರಕ್ಕೆ ಬಾರೀ ಯಶಸ್ಸು ದೊರೆಯಲಿದೆ.

9 / 13
ಮಕರ: ನಿಮ್ಮ ಮಾತಿನಿಂದ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ಸಂಸಾರದಲ್ಲಿ ವಿಪರೀತ ಕಲಹ- ಜಗಳ ಉದ್ಭವಿಸಲಿದೆ. ಬರಬೇಕಾದ ಹಣಕ್ಕೆ ನಾನಾ ರೀತಿಯ ಅಡೆ- ತಡೆಗಳು ಕಾಣಿಸಿಕೊಳ್ಳಲಿವೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದರಿಂದಲೋ ಅಥವಾ ವಿಡಿಯೋ ಮೊದಲಾದವು ಮಾಡಿ, ವಿವಾದಗಳನ್ನು ಮಾಡಿಕೊಳ್ಳುತ್ತೀರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೊರತೆ ಎದುರಾಗಿ, ಆತ್ಮಸ್ಥೈರ್ಯವೇ ಕುಗ್ಗಿಹೋಗುತ್ತದೆ.

10 / 13
ಕುಂಭ: ನಿಮ್ಮಲ್ಲಿ ಕೆಲವರಿಗೆ ಬ್ಲ್ಯಾಕ್ ಮೇಲ್ ಆಗಲಿದೆ. ಕಾಲಿನ ಮೀನ ಖಂಡ, ನರಗಳ ಸಮಸ್ಯೆ, ತೀವ್ರ ಜ್ವರ ಮೊದಲಾದ ದೈಹಿಕ ಆರೋಗ್ಯ ಸಮಸ್ಯೆಗಳು ಕಾಡಲಿವೆ. ವಿನಾಕಾರಣದ ಸಿಟ್ಟು- ಸೆಡವು ತೋರಿಸಲಿದ್ದೀರಿ. ಇತರರು ಮಾಡಿದ ತಪ್ಪಿಗೆ ನೀವು ತಲೆ ನೀಡಬೇಕಾಗುತ್ತದೆ. ಸೈಟು- ಕೃಷಿ ಜಮೀನು ವ್ಯಾಜ್ಯಗಳು ಕೋರ್ಟ್- ಕಚೇರಿ ಮೆಟ್ಟಿಲೇರಬಹುದು. ವೈದ್ಯಕೀಯ ಪರೀಕ್ಷೆಗಳಿಗೆ ಸಿಕ್ಕಾಪಟ್ಟೆ ಖರ್ಚಾಗಲಿದೆ.

11 / 13
ಮೀನ: ಯಾಕೆ ಖರ್ಚಾಗುತ್ತಿದೆ, ಹೇಗೆ ಖರ್ಚಾಗುತ್ತಿದೆ ಎಂಬ ಅಂದಾಜು ಸಹ ಮಾಡಲಿಕ್ಕೆ ಸಾಧ್ಯವಾಗದೆ ನೀರಿನಂತೆ ಹಣ ಖರ್ಚಾಗಲಿದೆ. ಇನ್ನು ಸಮಸ್ಯೆ ಆಗಲಾರದು ಎಂದುಕೊಂಡ ವಿಚಾರಗಳೇ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ನಿಮ್ಮ ವರ್ಚಸ್ಸಿಗೆ ಹಾನಿ ಆಗಬಹುದು. ಗಡುವಿನೊಳಗಾಗಿ ಕೆಲಸವನ್ನು ಮಾಡಿಕೊಡಲಿಕ್ಕೆ ಆಗದೆ ಅವಮಾನದ ಪಾಲಾಗುತ್ತೀರಿ. ಒಂದೇ ಕೆಲಸವನ್ನು ಪದೇಪದೇ ಮಾಡುವಂತಾಗಿ ಹಣ- ಸಮಯ ವ್ಯರ್ಥ ಆಗಲಿದೆ.

12 / 13
ಪರಿಹಾರ ಏನು- ಹೇಗೆ?  ಯಾರಿಗೆ ಜನ್ಮ ಜಾತಕದಲ್ಲಿಯೂ ಶನಿಯ ದುರ್ಬಲ, ನೀಚ ಸ್ಥಿತಿಯಲ್ಲಿ ಇರುತ್ತದೆ ಅಂಥವರು ಶನಿವಾರದ ದಿನ ಶನೈಶ್ಚರ ಗುಡಿಗಳಲ್ಲಿ ಎಳ್ಳಿನ ದೀಪವನ್ನು ಹಚ್ಚಿ. ನಿಮ್ಮಿಂದ ಸಾಧ್ಯವಾದಲ್ಲಿ ಅಶಕ್ತರಿಗೆ ಊಟದ ವ್ಯವಸ್ಥೆ ಮಾಡಿಕೊಡಿ ಮತ್ತು ಅಗತ್ಯ ಇರುವವರಿಗೆ ಬಟ್ಟೆ, ಹೊದಿಕೆಯನ್ನು ದಾನ ಮಾಡುವುದರಿಂದ ನಕಾರಾತ್ಮಕ ಪ್ರಭಾವ ಕಡಿಮೆ ಆಗುತ್ತದೆ. ಅನುಕೂಲ ಇರುವವರು ಜಪ- ಹೋಮವನ್ನು ಮಾಡಿಕೊಳ್ಳಬಹುದು.

13 / 13
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ

ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್

4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ

ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ

ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ

ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ

ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ

ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!