ಮೇಷ: ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆ, ಆಭರಣ, ಸೈಟು, ಷೇರು, ಕೃಷಿ ಜಮೀನು, ವಾಹನ ಮೊದಲಾದವುಗಳ ಖರೀದಿ ಮಾಡುವ ಯೋಗ ಇದೆ. ನೀವು ನೀಡಿ, ವಾಪಸ್ ಬಾರದೆ ಇರುವಂಥ ಸಾಲ, ಕೆಲಸ ಮಾಡಿದ ನಂತರ ಬಾರದೆ ಉಳಿದ ಹಣ ಬರುತ್ತದೆ, ನಿಮ್ಮ ಶ್ರಮಕ್ಕೆ ತಕ್ಕಂತೆ ಬಡ್ತಿ, ವೇತನ ಹೆಚ್ಚಳ ಮೊದಲಾದ ಶುಭ ಫಲಗಳನ್ನು ನಿರೀಕ್ಷೆ ಮಾಡಬಹುದು.