- Kannada News Photo gallery School building in a dilapidated state, teaching for children under a tree in Guttiganur village Kurugodu taluk Ballari
ಬಳ್ಳಾರಿ: ಶಿಥಿಲಗೊಂಡ ಗುತ್ತಿಗನೂರು ಶಾಲಾ ಕಟ್ಟಡ, ಮರದ ಅಡಿಯಲ್ಲಿ ಮಕ್ಕಳಿಗೆ ಪಾಠ
ಕರ್ನಾಟಕದಲ್ಲಿ ಅನೇಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರಣದೆ ಹಲವು ವರ್ಷಗಳೇ ಆಗಿವೆ. ಕೆಲವೊಂದು ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಶಿಕ್ಷಕರು, ಮಕ್ಕಳು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಅದೇ ರೀತಿ, ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳು ಶಿಥಿಲಗೊಂಡಿದೆ, ಮಕ್ಕಳಿಗೆ ಮರದಡಿ ಪಾಠ ಮಾಡಲಾಗುತ್ತಿದೆ.
Updated on: Jan 18, 2024 | 9:25 AM

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳು ಶಿಥಿಲಗೊಂಡಿದೆ.

1 ರಿಂದ 8 ನೇ ತರಗತಿ ಒಟ್ಟು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ಈ ಶಾಲೆಯಲ್ಲಿ ಬಡವರ ಮಕ್ಕಳು, ರೈತರ ಮಕ್ಕಳೇ ಹೆಚ್ಚಿದ್ದಾರೆ.

ಆದರೆ, 300ಕ್ಕೂ ಅಧಿಕ ಮಕ್ಕಳಿರುವ ಈ ಶಾಲೆಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಇಲ್ಲ.

ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 1 ರಿಂದ 8 ನೇ ತರಗತಿವರಗೆ ಕೇವಲ ನಾಲ್ಕು ಕೊಠಡಿಗಳು ಇವೆ.

ಸದ್ಯ, ಇರುವ ಕೊಠಡಿಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕುಸಿದು ಬೀಳುವ ಹಂತದಲ್ಲಿವೆ.

ಕೊಠಡಿಗಳ ಕೊರತೆಯಿಂದ ಹಾಗೂ ಇರುವ ಕೊಠಡಿಗಳು ಶಿಥಿಲಗೊಂಡ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಿಕ್ಷಕರು ಮಕ್ಕಳಿಗೆ ಬಯಲಲ್ಲಿ ಪಾಠ ಮಾಡುತ್ತಿದ್ದಾರೆ.

ಈ ಶಾಲೆಯಲ್ಲಿ ನಾಲ್ಕು ಸರ್ಕಾರಿ ಶಿಕ್ಷಕರು ಹಾಗೂ ಆರು ಅತಿಥಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸೂಕ್ತ ಕೊಠಡಿಗಳ ವ್ಯವಸ್ಥೆ ಮಾಡಿಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.




