Updated on: Dec 02, 2022 | 9:15 AM
ನಟ ಶಾರುಖ್ ಖಾನ್ ಅವರು ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ದೊಡ್ಡ ಬ್ರೇಕ್ ಪಡೆದ ನಂತರದಲ್ಲಿ ಅವರು ಮರಳಿ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.
ಮುಸ್ಲಿಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾಗೆ ಶಾರುಖ್ ಖಾನ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ‘ಶಾರುಖ್ಗೆ ಅಲ್ಲಾ ಒಳ್ಳೆಯದು ಮಾಡಲಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಶಾರುಖ್ ಖಾನ್ ಕುಟುಂಬಕ್ಕೆ ಇತ್ತೀಚೆಗೆ ತೊಂದರೆ ಎದುರಾಗಿತ್ತು. ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ ಕೇಸ್ನಲ್ಲಿ ಸಿಲುಕಿದ್ದರು. ನಂತರ ಈ ಪ್ರಕರಣದಿಂದ ಅವರು ಹೊರ ಬಂದರು.
ಶಾರುಖ್ ಖಾನ್ ಅವರ ನಟನೆಯ ‘ಪಠಾಣ್’ ಸಿನಿಮಾ ಜನವರಿ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರ ರಿಲೀಸ್ಗೂ ಮುನ್ನ ಅವರು ಮೆಕ್ಕಾಗೆ ತೆರಳಿದ್ದಾರೆ.
‘ಪಠಾಣ್’ ಮಾತ್ರವಲ್ಲದೆ, ‘ಜವಾನ್’, ‘ಡಂಕಿ’ ಸಿನಿಮಾ ಕೆಲಸಗಳಲ್ಲೂ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ.
Published On - 9:14 am, Fri, 2 December 22