ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ಕುಮಾರ್ ಅವರು ತಮ್ಮ ಷಷ್ಠಿ ಪೂರ್ತಿ ಆಚರಣೆ ಮಾಡಿಕೊಂಡಿದ್ದಾರೆ. ಅದೂ ಬಾಲ್ಯದ ಗೆಳೆಯರ ಜೊತೆಗೆ.
ಒಂದು ಸಾವಿರ ವರ್ಷಗಳ ಇತಿಹಾಸ ಇರುವ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ಗೀತಾ ಶಿವರಾಜ್ ಕುಮಾರ್ ಷಷ್ಠಿಪೂರ್ತಿ ಕಾರ್ಯಕ್ರಮ ನೆರವೇರಿದೆ.
ತಮಿಳುನಾಡಿನಲ್ಲಿ ಪುರಾತನ ಕಾಲದ ದೇವಸ್ಥಾನ ಹಾಗೇ ತಿರುಕ್ಕಡೈಯೂರ್ ಎಂಬ ಹೆಸರಿನಲ್ಲಿ ಈ ದೇವಸ್ಥಾನ ಪ್ರಸಿದ್ದಿ ಪಡೆದಿದೆ.
ತಿರುಕಡಯಾರ್ ದೇವಸ್ಥಾನದಲ್ಲಿ ನಡೆದ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಶಿವಣ್ಣ-ಗೀತಕ್ಕ ಅವರ ಮಕ್ಕಳಾದ ನಿವೇದಿತಾ ಹಾಗೂ ನಿರೂಪಮಾ ಸಹ ಭಾಗಿಯಾಗಿದ್ದರು.
ಷಷ್ಠಿ ಪೂರ್ತಿ ಕಾರ್ಯಕ್ರಮದಲ್ಲಿ ಮದುವೆ ಮುಹೂರ್ತದಲ್ಲಿ ಮಾಡಲಾಗುವ ಎಲ್ಲ ಶಾಸ್ತ್ರಗಳನ್ನು ಮಾಡಲಾಗಿದ್ದು, ಶಿವಣ್ಣ ಮತ್ತೊಮ್ಮೆ ಗೀತಾ ಅವರಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ 1986 ರಲ್ಲಿ ಮದುವೆ ಆಗಿದ್ದರು. ಗೀತಾ ಶಿವರಾಜ್ ಕುಮಾರ್ ಮಾಜಿ ಸಿಎಂ ಬಂಗಾರಪ್ಪನವರ ಪುತ್ರಿ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಚಿತ್ರರಂಗದ ಆದರ್ಶ ದಂಪತಿ. ಹಲವು ಹೊಸ ಜೋಡಿಗಳಿಗೆ ಶಿವಣ್ಣ-ಗೀತಕ್ಕ ಮಾದರಿಯಾಗಿದ್ದಾರೆ.
Published On - 3:32 pm, Thu, 8 August 24