ಇತ್ತೀಚೆಗಷ್ಟೆ ಅಗಲಿದ ನಟ, ರಾಜಕಾರಣಿ ವಿಜಯಕಾಂತ್ರ ಚೆನ್ನೈ ನಿವಾಸಕ್ಕೆ ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ವಿಜಯ್ಕಾಂತ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ
ಈ ವೇಳೆ ವಿಜಯ್ಕಾಂತ್ರ ಪತ್ನಿ ಹಾಗೂ ಮಕ್ಕಳನ್ನು ಮಾತನಾಡಿಸಿ ಸಾಂತ್ವನವನ್ನು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಹೇಳಿದರು.
ವಿಜಯ್ಕಾಂತ್ ಅವರು ಡಿಸೆಂಬರ್ 28 ಕ್ಕೆ ನಿಧನ ಹೊಂದಿದ್ದರು. ಅವರು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ವಿಜಯ್ಕಾಂತ್ ತಮಿಳು ಚಿತ್ರರಂಗದ ಜನಪ್ರಿಯ ನಾಯಕ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ವಿಜಯ್ಕಾಂತ್ ರಾಜಕಾರಣಿಯೂ ಆಗಿದ್ದರು.
1979ರಲ್ಲಿ ಚಿತ್ರರಂಗ ಪ್ರವೇಶಿಸಿದ ವಿಜಯ್ಕಾಂತ್ 2015ರ ವರೆಗೂ ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡರು.
ಸೂಪರ್ ಸ್ಟಾರ್ ರಜನೀಕಾಂತ್, ವಿಜಯ್, ಸೂರ್ಯ ಸೇರಿದಂತೆ ಹಲವು ತಮಿಳು ಚಿತ್ರರಂಗದ ಗಣ್ರು ವಿಜಯ್ಕಾಂತ್ ರ ಅಂತಿಮ ದರ್ಶನವನ್ನು ಪಡೆದಿದ್ದಾರೆ.