ಶಿವಮೊಗ್ಗದಲ್ಲೊಂದು ವಿಶೇಷ ಮದುವೆ: ಮದ್ವೆ ಛತ್ರದಲ್ಲೇ ರಕ್ತದಾನ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 10, 2025 | 6:02 PM

ಶಿವಮೊಗ್ಗದ ಒಂದು ಮದುವೆಯಲ್ಲಿ, ವಧು-ವರ ಮತ್ತು ಅತಿಥಿಗಳು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ. ರಕ್ತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿವಾಹದಲ್ಲಿ ರಕ್ತದಾನ ಮಾಡುವುದು ವಿಶೇಷವಾಗಿತ್ತು. ಇದು ಇತರರಿಗೆ ರಕ್ತದಾನ ಮಾಡಲು ಸ್ಫೂರ್ತಿ ಆಗಿದೆ. ಸ್ವಯಂ ವಧು-ವರ ರಕ್ತದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

1 / 5
ಅಲ್ಲಿ ಒಂದೆಡೆ ಮದುವೆ ಮನೆಯ ಸಂಭ್ರಮ ಮನೆ ಮಾಡಿತ್ತು. ಇನ್ನೊಂದೆಡೆ ಹಾಸಿಗೆಯಲ್ಲಿ ಮಲಗಿದವರಿಂದ ರಕ್ತ ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು. ಮದುವೆಗೆಂದು ಬಂದವರನ್ನು ರಕ್ತದಾನಕ್ಕೆ ಪ್ರೇರೇಪಿಸುವ ಕೆಲಸವೂ ನಡೆಯುತ್ತಿತ್ತು. ಅರೇ ಇದೇನು, ಮದುವೆ ಮನೆಯಲ್ಲಿ ರಕ್ತದಾನ ಅಂತೀರಾ. ಈ ಸ್ಟೋರಿ ಒಮ್ಮೆ ಓದಿ.

2 / 5
ಮದುವೆ ಮನೆ ಎಂದ್ರೆ ಸಡಗರ-ಸಂಭ್ರಮ ಸಾಮಾನ್ಯ ಇದ್ದೇ ಇರುತ್ತೆ. ವಧು-ವರರನ್ನು ಆಶೀರ್ವದಿಸಲು ಬರುವ ಬಂಧು, ಬಾಂಧವರು ಒಂದೆಡೆ ಕುಳಿತು ಕಷ್ಟ-ಸುಖದ ಜೊತೆಗೆ ಹಲವು ವಿಷಯಗಳ ಕುರಿತು ಹರಟೆ, ಚರ್ಚೆ ನಡೆಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ಮದುವೆ ಮನೆ ಮಾತ್ರ ಸ್ವಲ್ಪ ಭಿನ್ನವಾಗಿತ್ತು. ವಧು-ವರರನ್ನು ಆಶೀರ್ವದಿಸಲು ಬಂದವರು ಊಟ ಮಾಡಿ ಹೋಗದೆ ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

3 / 5
ಶಿವಮೊಗ್ಗದ ಗುಡ್ಡೇಕಲ್​ ಬಾಲಸುಬ್ರಮಣ್ಯ ಕಲ್ಯಾಣ ಮಂದಿರದಲ್ಲಿ ಇಂದು ನಡೆದ ಯಶ್ವಂತ್​ ಮತ್ತು ಗೀತಾರ ಮದುವೆ ಕೇವಲ ವಿವಾಹ ಬಂಧನಕ್ಕೆ ಸೀಮಿತವಾಗದೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಮದುವೆಯನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದ ನಾನು ರಕ್ತದಾನದ ಮೂಲಕ ಮದುವೆ ಆಗಿದ್ದೇನೆ.

4 / 5
ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸಬಹುದು ಎಂಬುದೇ ರಕ್ತದಾನ ಶಿಬಿರಕ್ಕೆ ಪ್ರೇರಣೆ ಎಂದು ಯಶ್ವಂತ್​ ಹೇಳಿದ್ದಾರೆ. ಜೊತೆಗೆ ಮದುವೆ ಮಂಟಪದಲ್ಲಿ ಸ್ವತಃ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

5 / 5
ಯಶ್ವಂತ್​ ಹಾಗೂ ಗೀತಾ ತಮ್ಮ ಮದುವೆ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ರಕ್ತದಾನದ ಮಹತ್ವ ಅರಿತುಕೊಳ್ಳುವುದರ ಜೊತೆಗೆ ಅದರ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆವಾಗಿದೆ.