ನಟ ಶಿವರಾಜ್ಕುಮಾರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಘೋಸ್ಟ್’ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಬಗ್ಗೆ ಒಂದು ಅಪ್ಡೇಟ್ ಸಿಕ್ಕಿದೆ.
‘ಘೋಸ್ಟ್’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. 2ನೇ ಹಂತದ ಚಿತ್ರೀಕರಣ ಡಿಸೆಂಬರ್ನಲ್ಲಿ ನಡೆಯಲಿದೆ. ನಟ-ನಿರ್ದೇಶಕ ಶ್ರೀನಿ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಘೋಸ್ಟ್’ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್ ಎನ್. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಮಿನರ್ವ ಮಿಲ್ನಲ್ಲಿ 15ಕ್ಕೂ ಹೆಚ್ಚು ಸೆಟ್ಗಳನ್ನು ನಿರ್ಮಿಸಿ, 28 ದಿನಗಳ ಕಾಲ ಮೊದಲ ಹಂತದ ಶೂಟಿಂಗ್ ಮಾಡಲಾಗಿದೆ.
ನಿರ್ದೇಶಕ ಶ್ರೀನಿ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಹಾಗೂ ಪ್ರಸನ್ನ ಅವರು ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣದಲ್ಲಿ ‘ಘೋಸ್ಟ್’ ಚಿತ್ರ ಮೂಡಿಬರುತ್ತಿದೆ.
ಐದು ಸಾಹಸ ಸನ್ನಿವೇಶಗಳು ‘ಘೋಸ್ಟ್’ ಚಿತ್ರದಲ್ಲಿ ಇರಲಿವೆ. ಶಿವರಾಜ್ಕುಮಾರ್ ಜೊತೆ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸುತ್ತಿದ್ದಾರೆ.