- Kannada News Photo gallery Tahsildar Prasad Rao pics in Kantara movie getup goes viral in social media
Kantara Movie: ‘ಕಾಂತಾರ’ ಗೆಟಪ್ನಲ್ಲಿ ಬಂದ ತಹಶೀಲ್ದಾರ್ ಜೊತೆ ಫೋಟೋಗಾಗಿ ಮುಗಿಬಿದ್ದ ಜನ; ಗ್ಯಾಲರಿ ನೋಡಿ
Tahsildar Prasad Rao: ಪರಭಾಷೆಯ ಪ್ರೇಕ್ಷಕರ ಮೇಲೆ ಕನ್ನಡದ ‘ಕಾಂತಾರ’ ಸಿನಿಮಾ ಸಾಕಷ್ಟು ಪ್ರಭಾವ ಬೀರಿದೆ. ಆ ಮಾತಿಗೆ ಸಾಕ್ಷಿ ಒದಗಿಸುವಂತಿದೆ ಈ ಘಟನೆ.
Updated on: Nov 22, 2022 | 5:44 PM

Tahsildar Prasad Rao pics in Kantara movie getup goes viral in social media

Tahsildar Prasad Rao pics in Kantara movie getup goes viral in social media

ಪರಭಾಷೆಯ ಪ್ರೇಕ್ಷಕರ ಮೇಲೆ ಕನ್ನಡದ ‘ಕಾಂತಾರ’ ಸಿನಿಮಾ ಸಾಕಷ್ಟು ಪ್ರಭಾವ ಬೀರಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಭೂತಕೋಲದ ವೇಷ ಧರಿಸಿ ಬಂದ ತಹಶೀಲ್ದಾರ್ ಜೊತೆ ಫೋಟೋ ತೆಗೆದುಕೊಳ್ಳಲು ಅಲ್ಲಿನ ಜನರು ಮುಗಿಬಿದ್ದಿದ್ದಾರೆ.

ಪ್ರಸಾದ್ ರಾವ್ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ ಇದೆ. ವೇದಿಕೆಯಲ್ಲಿ ಅವರು ‘ಕಾಂತಾರ’ ಚಿತ್ರದ ರೀತಿ ವೇಷ ಹಾಕಿಕೊಂಡು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಆ ಬಳಿಕ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಗಲ್ಲಾಪೆಟ್ಟಿಗೆಯಲ್ಲಿ ‘ಕಾಂತಾರ’ ಸಿನಿಮಾ ಮೋಡಿ ಮಾಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್ನಿಂದ ಈ ಚಿತ್ರಕ್ಕೆ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಕೂಡ ಚಿತ್ರವನ್ನು ಕೊಂಡಾಡಿದ್ದಾರೆ.



















