Updated on:Nov 22, 2022 | 3:37 PM
ನಿಮ್ಮ ಮುಖದ ಸೌಂದರ್ಯದಲ್ಲಿ ಕಣ್ಣು ಪ್ರಮುಖವಾದುದು. ನಿಮ್ಮ ಮಾದಕ ನೋಟದ ಮೂಲಕವೇ ಜನರನ್ನು ನಿಮ್ಮತ್ತ ಸೆಳೆಯುವ ಶಕ್ತಿ ಕಣ್ಣಿಗಿದೆ. ಆದ್ದರಿಂದ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಫಾಕ್ಸಿ ಐ ಮೇಕಪ್ ಸ್ಟೆಪ್ ಬೈ ಸ್ಟೆಪ್ ವಿಧಾನ ಇಲ್ಲಿದೆ. ನಿಮ್ಮ ವಿಶೇಷ ದಿನಗಳಲ್ಲಿ ನೀವೂ ಪ್ರಯತ್ನಿಸಿ ಆಕರ್ಷಕ ಲುಕ್ ಪಡೆಯಿರಿ.
ಹಂತ 1: ಇದಕ್ಕಾಗಿ ನೀವು ಮೊದಲಿಗೆ ಮೂಗಿನ ಒಂದು ಬದಿಯಿಂದ ಕಣ್ಣಿನ ತುದಿಗೆ ನೇರವಾಗಿ ಇಟ್ಟುಕೊಂಡು ಹುಬ್ಬುಗಳ ತುದಿಯ ವರೆಗೆ(ಚಿತ್ರದಲ್ಲಿ ತೋರಿಸಿರುವಂತೆ) ಮಾರ್ಕ್ ಮಾಡಿ. ಮಾರ್ಕ್ ಬದಲಾಗಿ ಒಂದು ಸಣ್ಣ ಟೇಪ್ ಕೂಡ ಅಂಟಿಸಬಹುದು.
ಹಂತ 2: ಉತ್ತಮ ಗುಣಮಟ್ಟದ ಐಶ್ಯಾಡೋವನ್ನು ತೆಗೆದು ಕೊಂಡು ನಿಮ್ಮ ಕಣ್ಣಿನ ಮೇಲ್ಭಾದಿಂದ ನಿಮ್ಮ ಹುಬ್ಬಿನ ತುದಿಯ ವರೆಗೂ ಮೇಲ್ಮುಖವು ಸರಿಸುಮಾರು ತ್ರಿಕೋನಾಕೃತಿಯಲ್ಲಿರುವಂತೆ (ಚಿತ್ರದಲ್ಲಿ ತೋರಿಸಿರುವಂತೆ) ಹಚ್ಚಿರಿ. ಐಶ್ಯಾಡೋ ಬ್ರೆಶ್ ಆದಷ್ಟು ಸ್ವಚ್ಚವಾಗಿಡುವುದು ಅಗತ್ಯ.
ಹಂತ 3: ಪೆನ್ಸಿಲ್ ಐಲೈನರ್ ಅಥವಾ ಲಿಕ್ವಿಡ್ ಲೈನರ್ ಬಳಸಿ ನಿಧಾನವಾಗಿ ಕಣ್ಣಿನ ತುದಿಯ ವರೆಗೆ (ಚಿತ್ರದಲ್ಲಿ ತೋರಿಸಿರುವಂತೆ) ಗೆರೆ ಎಳೆಯಿರಿ. ನಿಮ್ಮ ಐಶ್ಯಾಡೋ, ಹುಬ್ಬು ಹಾಗೂ ಐಲೈನರ್ ಒಂದೇ ರೀತಿ ತ್ರಿಕೋನಾಕೃತಿಯಲ್ಲಿರುವಂತೆ ಇರುವಂತೆ ನೋಡಿಕೊಳ್ಳಿ.
ಹಂತ 4: ನಿಮ್ಮ ಕಣ್ಣುಗಳ ಒಳಗಿನ ಮೂಲೆಯಿಂದ ಐಲೈನರ್ ತುಂಬಾ ತೆಳುವಾಗಿ ಹಚ್ಚಿ. ಜೊತೆಗೆ ಕಣ್ಣಿನ ತುದಿಯ ವರೆಗೆ ತಲುಪುವ ಹೊತ್ತಿಗೆ ದಪ್ಪವಾಗಿ ಹಚ್ಚುತ್ತಾ ಹೋಗಿ. ಮುಂದೆ, ನಿಮ್ಮ ಕಣ್ಣುಗಳ ಒಳ ಮೂಲೆಯಲ್ಲಿ ಹೈಲೈಟರ್ನ ಬಳಸಿ ಹಾಗೂ ಕಣ್ಣಿನ ಮೇಲೆ ತುಂಬಾ ಹಗುರವಾಗಿ ಕೈಯಿಂದ ಹೈಲೈಟರ್ನ ಹಚ್ಚಿ. ಇದು ನಿಮ್ಮ ಕಣ್ಣು ಆಕರ್ಷಕವಾಗಿ ಮಿನುಗುವಂತೆ ಮಾಡುತ್ತದೆ.
ಹಂತ 5: ನಿಮ್ಮ ರೆಪ್ಪೆಯ ಕೂದಲುಗಳನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲು ಮಸ್ಕರಾವನ್ನು ಬಳಸಿ. ಇಲ್ಲದಿದ್ದರೆ ಕೃತಕ ಕಣ್ಣಿನ ರೆಪ್ಪೆಯನ್ನು ಬಳಸಬಹುದು. ಈಮೇಲಿನ ಐದು ಸುಲಭದ ಹಂತದೊಂದಿಗೆ ಫಾಕ್ಸಿ ಐಸ್ಸ್ ಪಡೆಯಿರಿ. ಇದು ನಿಮ್ಮ ಗ್ರ್ಯಾಂಡ್ ಬಟ್ಟೆಗಳಿಗೆ ಹಾಟ್ ಲುಕ್ ನೀಡುತ್ತದೆ.
Published On - 3:37 pm, Tue, 22 November 22