‘ಅಕಟಕಟ’ ಚಿತ್ರತಂಡಕ್ಕೆ ಸೇರ್ಪಡೆಯಾದ ರಂಗಭೂಮಿ ಹಿನ್ನೆಲೆಯ ಕಲಾವಿದೆ ಶ್ವೇತಾ ಶ್ರೀನಿವಾಸ್​

Edited By:

Updated on: May 21, 2022 | 4:59 PM

ಶ್ವೇತಾ ಶ್ರೀನಿವಾಸ್ ಅವರು ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರೀಗ ‘ಅಕಟಕಟ’ ಚಿತ್ರದಲ್ಲೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

1 / 5
ನಿರ್ದೇಶಕ ನಾಗರಾಜ್ ಸೋಮಯಾಜಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ಅಕಟಕಟ’ ಸಿನಿಮಾ ತನ್ನ ಪಾತ್ರವರ್ಗದ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ನಟಿ ಶ್ವೇತಾ ಶ್ರೀನಿವಾಸ್​ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಈಗ ಹಂಚಿಕೊಂಡಿದೆ.

ನಿರ್ದೇಶಕ ನಾಗರಾಜ್ ಸೋಮಯಾಜಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ಅಕಟಕಟ’ ಸಿನಿಮಾ ತನ್ನ ಪಾತ್ರವರ್ಗದ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ನಟಿ ಶ್ವೇತಾ ಶ್ರೀನಿವಾಸ್​ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಈಗ ಹಂಚಿಕೊಂಡಿದೆ.

2 / 5

ನಟಿ ಚೈತ್ರಾ ಆಚಾರ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದಷ್ಟೇ ಕೇಳಿಬಂದಿತ್ತು. ಈಗ ಮತ್ತೊರ್ವ ಪ್ರತಿಭಾನ್ವಿತ ನಟಿ ಶ್ವೇತಾ ಶ್ರೀನಿವಾಸ್ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ರಂಗಭೂಮಿ ಕಲಾವಿದೆಯೂ ಆಗಿರುವ ಅವರ ಆಗಮನದಿಂದ ಚಿತ್ರತಂಡದ ಬಲ ಹೆಚ್ಚಿದೆ.

3 / 5

ಶ್ವೇತಾ ಶ್ರೀನಿವಾಸ್ ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು ‘ಪಂಚರಂಗಿ’, ‘ಟೋನಿ’, ‘ದ್ಯಾವ್ರೇ’, ‘ಬೆಂಕಿಪಟ್ಟಣ’, ‘ಕೃಷ್ಣಲೀಲಾ’, ‘ಸಂತೆ’, ‘ದೊಡ್ಮನೆ ಹುಡ್ಗ’, ‘ವೆನಿಲಾ’, ‘ನಾತಿಚರಾಮಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

4 / 5

ಶ್ವೇತಾ ಅವರು ‘ಅಕಟಕಟ’ ಸಿನಿಮಾದಲ್ಲಿ ವನಜಾ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಹೆಚ್ಚು ಮಾಹಿತಿ ಬಿಟ್ಟುಕೊಟ್ಟಿಲ್ಲ. ‘ಪ್ರತಿ ಸಿನಿಮಾದಲ್ಲಿಯೂ ನಾನು ವಿಶೇಷವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ‘ಅಕಟಕಟ’ ಚಿತ್ರದಲ್ಲಿಯೂ ಚಾಲೆಂಜಿಂಗ್ ಪಾತ್ರ ಇದೆ’ ಎಂದಿದ್ದಾರೆ ಶ್ವೇತಾ.

5 / 5

‘ಇದೊಂದು ಅಪರೂಪದ ಪಾತ್ರವಾಗಿದ್ದು, ನನ್ನನು ನಾನು ಕಂಡುಕೊಳ್ಳಲು ಈ ಪಾತ್ರ ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಇದು ಕನೆಕ್ಟ್ ಆಗುತ್ತದೆ’ ಎಂದು ಶ್ವೇತಾ ಶ್ರೀನಿವಾಸ್​ ಹೇಳಿದ್ದಾರೆ. ಸಂಚಾರಿ ವಿಜಯ್‌ ನಟನೆಯ ‘ಪುಕ್ಸಟ್ಟೆ ಲೈಫು’ ಚಿತ್ರವನ್ನು ನಿರ್ಮಾಣ ಮಾಡಿದ್ದ ನಾಗರಾಜ್‌ ಸೋಮಯಾಜಿ ಅವರು ಈಗ ‘ಅಕಟಕಟ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

Loading...
Unable to load recommendations.
Follow Us