ಸೈಮಾನಲ್ಲಿ ಮಿಂಚಿದ ಕನ್ನಡಿಗರು ಇಲ್ಲಿದೆ ಕೆಲವು ಸುಂದರ ಚಿತ್ರಗಳು
SIIMA 2024: ಸೈಮಾ 2024 ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕನ್ನಡದ ಹಲವು ಸೆಲೆಬ್ರಿಟಿಗಳು ಸೈಮಾನಲ್ಲಿ ಭಾಗವಹಿಸಿದ್ದರು. ಸೈಮಾನಲ್ಲಿ ಮಿಂಚು ಹರಿಸಿದ ಕನ್ನಡದ ಸೆಲೆಬ್ರಿಟಿಗಳ ಚಿತ್ರಗಳು ಇಲ್ಲಿವೆ.
1 / 7
ಸೈಮಾ 2024 ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್, ಹಿರಿಯ ನಟಿ ಮಾಲಾಶ್ರೀ ಅವರೊಟ್ಟಿಗೆ ಆಪ್ತವಾದ ಮಾತುಕತೆಯಲ್ಲಿದ್ದಾರೆ.
2 / 7
ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಅರ್ಧ ಶತಮಾನದ ಸೇವೆಯನ್ನು ಪರಿಗಣಿಸಿ ಅವರಿಗೆ ವಿಶೇಷ ಪ್ರಶಸ್ತಿಯನ್ನು ಸೈಮಾ ನೀಡಿದೆ. ನಟಿ ಶ್ರೆಯಾ ಹಾಗೂ ಮನೋಜ್ ಅವರು ಪ್ರಶಸ್ತಿ ನೀಡಿದ್ದಾರೆ.
3 / 7
ಕನ್ನಡದ ನಟ ದುನಿಯಾ ವಿಜಯ್ ಈ ಬಾರಿ ಸೈಮಾ ಗೆದ್ದಿದ್ದು ತೆಲುಗು ಸಿನಿಮಾಕ್ಕಾಗಿ. ತೆಲುಗಿನ ಭಗವಂತ ಕೇಸರಿ ಸಿನಿಮಾದ ವಿಲನ್ ಪಾತ್ರಕ್ಕೆ ದುನಿಯಾ ವಿಜಯ್ಗೆ ಅತ್ಯುತ್ತಮ ವಿಲನ್ ಪ್ರಶಸ್ತಿ ಬಂದಿದೆ.
4 / 7
ನಟಿ ರುಕ್ಮಿಣಿ ವಸಂತ್ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕಾರ ಮಾಡಿದರು. ಇದು ಅವರ ಮೊದಲ ಸೈಮಾ ಪ್ರಶಸ್ತಿ ಆಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹಲವು ಪ್ರಶಸ್ತಿ ಗೆದ್ದಿತು.
5 / 7
ನಟ ರಿಷಿ ಹಾಗೂ ಶುಬ್ರ ಅಯ್ಯಪ್ಪ ಅವರುಗಳು ಅಚ್ಚುಕಟ್ಟಾಗಿ, ತಮಾಷೆ ಭರಿತವಾಗಿ ಸೈಮಾ 2024 ಅವಾರ್ಡ್ ಶೋ ನಡೆಸಿಕೊಟ್ಟರು. ಕನ್ನಡ ಪ್ರಶಸ್ತಿ ವಿತರಣೆಗೆ ಇವರು ನಿರೂಪಕರಾಗಿದ್ದರು.
6 / 7
ನಟಿ ಶಾನ್ವಿ ಶ್ರೀವತ್ಸ ಅವರೂ ಸಹ ಪ್ರಶಸ್ತಿಗೆ ನಾಮಿನೇಟ್ ಆಗಿರಲಿಲ್ಲ ಆದರೆ ಸ್ಟೇಜ್ ಮೇಲೆ ಅತ್ಯುತ್ತಮವಾಗಿ ನೃತ್ಯ ಪ್ರದರ್ಶನ ನೀಡಿ ನೆರೆದವರ ಹೃದಯ ಗೆದ್ದರು ಶಾನ್ವಿ ಶ್ರೀವತ್ಸ.
7 / 7
ನಟಿ ಪ್ರಣಿತಾ ಅವರ ಯಾವ ಸಿನಿಮಾ ಸಹ ನಾಮಿನೇಟ್ ಆಗಿರಲಿಲ್ಲ ಆದರೆ ಅತಿಥಿಯಾಗಿ ಅವರು ಬಂದಿದ್ದರು. ಇತ್ತೀಚೆಗಷ್ಟೆ ಪ್ರಣಿತಾಗೆ ಗಂಡು ಮಗು ಆಗಿದೆ. ಹಾಗೆಂದು ಅವರು ಸೈಮಾ ತಪ್ಪಿಸಿಕೊಂಡಿಲ್ಲ.