
ನಟಿ ಮೃಣಾಲ್ ಠಾಕೂರ್ ಅವರು ‘ಸೀತಾ ರಾಮಂ’ ಸಿನಿಮಾ ಮೂಲಕ ಭರ್ಜರಿ ಖ್ಯಾತಿ ಪಡೆದರು. ಇದು ತೆಲುಗಿನಲ್ಲಿ ಅವರು ನಟಿಸಿದ ಮೊದಲ ಸಿನಿಮಾ. ಈ ಚಿತ್ರದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಮೃಣಾಲ್ ಅವರು ಹೊಸಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಹಂಚಿಕೊಂಡಿರುವ ಹೊಸ ಫೋಟೋ ಸಾಕಷ್ಟು ಗಮನ ಸೆಳೆದಿದೆ. ನಟಿಯನ್ನು ಎಲ್ಲರೂ ಹೊಗಳುತ್ತಿದ್ದಾರೆ.

ಮೃಣಾಲ್ ಅವರು ಹೊಸ ಫೋಟೋದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಹಾಕಿರೋ ಉಡುಗೆ ಎಲ್ಲರ ಗಮನ ಸೆಳೆದಿದೆ.

‘ಉಡುಗೆ, ನೀವು ಮತ್ತು ನಗು ಎಲ್ಲವೂ ಪರ್ಫೆಕ್ಟ್ ಮ್ಯಾಚಿಂಗ್’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇದರ ಜೊತೆ ನೆಗೆಟಿವ್ ಕಮೆಂಟ್ಗಳು ಬಂದಿವೆ.

ಮೃಣಾಲ್ ಠಾಕೂರ್ ಅವರು ಈ ರೀತಿಯ ನೆಗೆಟಿವ್ ಕಮೆಂಟ್ಗಳ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಅವರು ಹಲವು ರೀತಿಯ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

2014ರಲ್ಲಿ ರಿಲೀಸ್ ಆದ ‘ವಿಟ್ಟಿ ದಾಂಡು’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಮೃಣಾಲ್ ಕಾಲಿಟ್ಟರು. ಇದು ಮರಾಠಿ ಸಿನಿಮಾ. ಹಿಂದಿಯ ‘ಲವ್ ಸೋನಿಯಾ’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು.

ಸದ್ಯ ಐದು ಸಿನಿಮಾ ಕೆಲಸಗಳಲ್ಲಿ ಮೃಣಾಲ್ ಠಾಕೂರ್ ಅವರು ಬ್ಯುಸಿ ಆಗಿದ್ದಾರೆ. ಅವರಿಗೆ ಇಷ್ಟು ಜನಪ್ರಿಯತೆ ಸಿಕ್ಕಿದ್ದು 2022ರಲ್ಲಿ ರಿಲೀಸ್ ಆದ ‘ಸೀತಾ ರಾಮಂ’ ಸಿನಿಮಾ ಮೂಲಕ.