
ಮಹೇಶ್ ಬಾಬು ಮಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸ್ಟಾರ್ ಹೀರೋ ಮಗಳು ಅನ್ನೋ ಕಾರಣಕ್ಕೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಇದನ್ನು ಅವರು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸಿತಾರಾ ಅವರು ಕ್ಯಾಮೆರಾ ಎದುರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು ಅನೇಕ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾರೆ.

ಸಿತಾರಾ ಹಾಗೂ ಅವರ ತಾಯಿ ನಮ್ರತಾ ಮಿರರ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನ್ ಹಾಡಿನಲ್ಲಿ ಸಿತಾರಾ ಕೂಡ ಹೆಜ್ಜೆ ಹಾಕಿದ್ದರು. ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಶೀಘ್ರದಲ್ಲೇ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಸಿತಾರಾ ಅವರು ಇತ್ತೀಚೆಗೆ ತಾಯಿ ನಮ್ರತಾ ಜೊತೆ ವಿದೇಶಕ್ಕೆ ಟ್ರಿಪ್ ತೆರಳಿದ್ದರು. ಈ ಫೋಟೋ ವೈರಲ್ ಆಗಿದೆ.