Sleeping Tips: ಬಟ್ಟೆಯಿಲ್ಲದೆ ನಗ್ನವಾಗಿ ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

Updated on: May 13, 2025 | 5:18 PM

ರಾತ್ರಿ ಮಲಗುವಾಗ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು ಎಂಬ ಕಾರಣಕ್ಕೆ ಜನರು ಸಾಮಾನ್ಯವಾಗಿ ಸಡಿಲವಾದ ಪೈಜಾಮಾ ಮತ್ತು ಟಿ-ಶರ್ಟ್ ಸೇರಿದಂತೆ ಹೆಚ್ಚಾಗಿ ಆರಾಮದಾಯಕ ಬಟ್ಟೆಗಳನ್ನು ಧರಿಸುತ್ತಾರೆ. ಆದ್ರೆ ನಿಮ್ಗೊತ್ತಾ ಸಡಿಲವಾದ ಬಟ್ಟೆಗಳನ್ನು ಧರಿಸುವುದಕ್ಕಿಂಲೂ ಬಟ್ಟೆಯಿಲ್ಲದೆ ನಗ್ನವಾಗಿ ಮಲಗುವುದು ತುಂಬಾನೇ ಒಳ್ಳೆಯದಂತೆ. ಹೌದು ಬಟ್ಟೆ ಇಲ್ಲದೆ ಮಲಗೋದಾ ಎಂದು ಹುಬ್ಬೇರಿಸಬೇಡಿ, ಹೀಗೆ ಮಲಗುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಹಾಗಿದ್ರೆ ಬಟ್ಟೆಯಿಲ್ಲದೆ ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ ಬನ್ನಿ.

1 / 6
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ: ಬಟ್ಟೆಯಿಲ್ಲದೆ ಮಲಗುವ ಅಭ್ಯಾಸವು  ನಿಮ್ಮ  ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ನಿದ್ರೆ ಸರಿಯಾಗಿರದಿದ್ದರೆ ಅದು  ಒತ್ತಡದ ಮಟ್ಟದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಿರುವಾಗ ನಗ್ನವಾಗಿ ಮಲಗಿ ಚೆನ್ನಾಗಿ ನಿದ್ರೆ ಮಾಡುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ಈ ಮೂಲಕ ನೀವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಬಹುದು.

2 / 6
ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಕಾರಿ: ಬಟ್ಟೆ ಇಲ್ಲದೆ ಮಲಗುವುದು ತುಂಬಾನೇ ಒಳ್ಳೆಯದು. ಇದು ನಿಮ್ಮ ರಕ್ತ ಪರಿಚಲನೆ ಸುಧಾರಿಸುತ್ತದೆ. ವಾಸ್ತವವಾಗಿ, ರಾತ್ರಿಯಲ್ಲಿ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ನಮ್ಮ ರಕ್ತನಾಳಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಿರುವಾಗ ಬಟ್ಟೆಯಿಲ್ಲದೆ  ಮಲಗುವ ಅಭ್ಯಾಸವು ನಮ್ಮ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳು ನಿಮ್ಮ ಚರ್ಮ ಮತ್ತು ಕೂದಲಿನ ಕೋಶಗಳನ್ನು ತಲುಪುತ್ತವೆ. ಇದು ನಿಮ್ಮ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಒಳ್ಳೆಯದು.

3 / 6
ಹೃದ್ರೋಗ ಮತ್ತು ಟೈಪ್ 2 ಮಧುಮೇಹದ ಕಡಿಮೆ ಅಪಾಯ ಮಾಡುತ್ತದೆ: ನೀವು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯದೆ ಹೋದರೆ ನಿಮಗೆ ಮಧುಮೇಹ ಅಥವಾ ಹೃದ್ರೋಗ ಬರುವ ಅಪಾಯವಿರುತ್ತದೆ. ಹೀಗಿರುವಾಗ ನಗ್ನವಾಗಿ ಮಲಗುವುದರಿಂದ ಬೇಗ ನಿದ್ರೆ ಬರುವುದು ಮಾತ್ರವಲ್ಲದೆ, ನಿದ್ರೆಯ ಗುಣಮಟ್ಟವನ್ನು ಕೂಡಾ ಹೆಚ್ಚಿಸುತ್ತದೆ. ಹೀಗೆ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯುವ ಮೂಲಕ ಹೃದ್ರೋಗ, ಟೈಪ್‌ 2 ಮಧುಮೇಹದಿಂದ ದೂರವಿರಬಹುದು.

4 / 6
ಉತ್ತಮ ಗುಣಮಟ್ಟದ ನಿದ್ರೆ ಪಡೆಯಲು ಸಹಕಾರಿ:  ಹಲವರು ಕಣ್ಣು ಮುಚ್ಚಿದ್ರೂ ನಿದ್ರೆ ಹತ್ತೋದೆ ಇಲ್ಲ ಎಂದು ಹೇಳುತ್ತಿರುತ್ತಾರೆ. ನಿಮಗೂ ಈ ಸಮಸ್ಯೆ ಇದೆಯಾ ಹಾಗಿದ್ದರೆ ಬಟ್ಟೆಯಿಲ್ಲದೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಈ ಅಭ್ಯಾಸವು ನೀವು ವೇಗವಾಗಿ ನಿದ್ರಿಸಲು ಸಹಾಯ ಮಾಡುವುದಲ್ಲದೆ, ನಿಮ್ಮ ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

5 / 6
ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ: ಇತ್ತೀಚಿನ ಸಂಶೋಧನೆಯೊಂದು ಬಿಗಿಯಾದ ಒಳ ಉಡುಪು ಧರಿಸುವುದರಿಂದ ಇದು ಪುರುಷರ ವೀರ್ಯ ಉತ್ಪಾದನೆಯನ್ನು ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿದೆ. ಹೀಗಿರುವಾಗ ಬಟ್ಟೆಯಿಲ್ಲದೆ ಮಲಗುವ ಮೂಲಕ ಫಲವತ್ತತೆ ಹೆಚ್ಚಿಸಬಹುದು.

6 / 6
ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ: ರಾತ್ರಿ ಬಟ್ಟೆ ಇಲ್ಲದೆ ಮಲಗುವುದರಿಂದ ಚರ್ಮವು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಇದು ಚರ್ಮದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೂ ಇದು ಖಾಸಗಿ ಅಂಗಳನ್ನು ಸೋಂಕಿನಿಂದ ರಕ್ಷಿಸುತ್ತದೆ.

Published On - 5:17 pm, Tue, 13 May 25