ಗೌತಮಿ ಜಾಧವ್ ಹ್ಯಾಪಿ ಫ್ಯಾಮಿಲಿ ಫೋಟೋ; ಖುಷಿಯಾಗಿರಲು ಇನ್ನೇನು ಬೇಕು?
ಗೌತಮಿ ಜಾಧವ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಪತಿ ಜೊತೆ, ಗೆಳೆಯರ ಜೊತೆ ಸಮಯ ಕಳೆಯುವ ಅವರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈಗ ಅವರು ತಮ್ಮ ನೆಚ್ಚಿನ ಶ್ವಾನಗಳ ಜೊತೆ ಪೋಸ್ ಕೊಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
Updated on: May 13, 2025 | 12:58 PM

ಗೌತಮಿ ಜಾಧವ್ ಅವರು ಸದಾ ಪಾಸಿಟಿವಿಟಿ ಹರಡಲು ಬಯಸುವವರು. ಕುಟುಂಬದಲ್ಲೂ ಅವರು ಯಾವುದೇ ನೆಗೆಟಿವ್ ಥಾಟ್ ಉಳಿದುಕೊಳ್ಳಲು ಬಿಡೋದಿಲ್ಲ. ಈ ಕಾರಣದಿಂದ ಅವರ ಕುಟುಂಬ ತುಂಬಾನೇ ಖುಷಿಯಿಂದ ಇದೆ. ಈ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.

ಗೌತಮಿ ಜಾಧವ್ ಅವರು ಅಭಿಷೇಕ್ ಕಾಸರುಗೋಡು ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಇನ್ನೂ ಮೂರು ಸದಸ್ಯರಿದ್ದಾರೆ. ಅದು ಅವರು ಸಾಕಿದ ಶ್ವಾನಗಳು. ಇವುಗಳನ್ನು ಗೌತಮಿ ಅವರು ತುಂಬಾನೇ ಪ್ರೀತಿಸುತ್ತಾರೆ.

ಗೌತಮಿ ಜಾಧವ್ ಅವರು ತಮ್ಮ ಪ್ರೀತಿಯ ಶ್ವಾನಗಳಿಗೆ ಹೆಸರು ಇಟ್ಟಿದ್ದಾರೆ. ಒಂದಕ್ಕೆ ಕ್ವೀನ್, ಹ್ಯಾಪಿ ಹಾಗೂ ಕಾಫಿ ಎಂದು ಹೆಸರು ಇಟ್ಟಿದ್ದಾರೆ. ಈ ಮೂರು ಶ್ವಾನಗಳ ಬಗ್ಗೆ ಗೌತಮಿ ಜಾಧವ್ ಅವರು ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ.

ಬಿಗ್ ಬಾಸ್ಗೆ ಬಂದಾಗ ಗೌತಮಿ ಜಾಧವ್ ಅವರು ಈ ಬಗ್ಗೆ ಮಾತನಾಡಿದ್ದರು. ಕ್ವೀನ್, ಹ್ಯಾಪಿ ಹಾಗೂ ಕಾಫಿ ತಮ್ಮ ಮಕ್ಕಳು ಎಂದು ಕರೆದಿದ್ದರು. ಅವುಗಳನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದಾಗಿಯೂ ಗೌತಮಿ ಜಾಧವ್ ಅವರು ರಿವೀಲ್ ಮಾಡಿದ್ದರು.

ಗೌತಮಿ ಜಾಧವ್ ಅವರು 100 ದಿನಗಳಿಗೂ ಅಧಿಕ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರನ್ನು ಶ್ವಾನಗಳು ತುಂಬಾನೇ ಮಿಸ್ ಮಾಡಿಕೊಂಡಿದ್ದವು. ಈ ವಿಡಿಯೋಗಳನ್ನು ಬಿಗ್ ಬಾಸ್ ಮನೆಯಲ್ಲಿ ಪ್ಲೇ ಮಾಡಲಾಗಿತ್ತು.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



