IPL 2025: RCB ತಂಡಕ್ಕೆ ಆಘಾತ: ಉಳಿದ ಪಂದ್ಯಗಳಿಗೆ ಪ್ರಮುಖ ಆಟಗಾರ ಅಲಭ್ಯ?
IPL 2025 RCB vs KKR: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಗೆ ಮೇ 17 ರಂದು ಮತ್ತೆ ಚಾಲನೆ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಆರ್ಸಿಬಿ ತಂಡದ ಪ್ರಮುಖ ವೇಗಿ ಅಲಭ್ಯರಾಗುವುದು ಖಚಿತವಾಗಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಪುನರಾರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಘಾತ ಎದುರಾಗಿದೆ. ಆರ್ಸಿಬಿ ತಂಡದ ಪ್ರಮುಖ ಆಟಗಾರ ಜೋಶ್ ಹೇಝಲ್ವುಡ್ (Josh Hazelwood) ಟೂರ್ನಿಯ ಉಳಿದ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
1 / 5
ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ಮ್ಯಾನೇಜರ್ ನೀಲ್ ಮ್ಯಾಕ್ಸ್ವೆಲ್, ಜೋಶ್ ಹೇಝಲ್ವುಡ್ ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅನ್ನು ಗಮನದಲ್ಲಿರಿಸಿ ಅವರು ಮನೆಯಲ್ಲೇ ಉಳಿಯುವ ಸಾಧ್ಯತೆಯಿದೆ. ಅಲ್ಲದೆ ಕಮಿನ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡದ ಉಳಿದ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ ಎಂದಿದ್ದಾರೆ.
2 / 5
ಇದರೊಂದಿಗೆ ಜೋಶ್ ಹೇಝಲ್ವುಡ್ ಆರ್ಸಿಬಿ ತಂಡದ ಉಳಿದ ಮ್ಯಾಚ್ಗಳಿಗೆ ಅಲಭ್ಯರಾಗುವುದು ಬಹುತೇಕ ಕನ್ಫರ್ಮ್ ಆದಂತಾಗಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ0ದ್ಯದಲ್ಲಿ ಭುಜದ ನೋವಿನ ಕಾರಣ ಅವರು ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ಲುಂಗಿ ಎನ್ಗಿಡಿ ಆಡಿದ್ದರು. ಇದೀಗ ಹೇಝಲ್ವುಡ್ ಅಲಭ್ಯರಾದರೆ, ಉಳಿದ ಪಂದ್ಯಗಳಲ್ಲಿ ಲುಂಗಿ ಎನ್ಗಿಡಿ ಅಥವಾ ನುವಾನ್ ತುಷಾರ ಕಣಕ್ಕಿಳಿಯುವ ಸಾಧ್ಯತೆಯಿದೆ.
3 / 5
ಅಂದಹಾಗೆ ಜೋಶ್ ಹೇಝಲ್ವುಡ್ ಉಳಿದ ಪಂದ್ಯಗಳಿಗೆ ಅಲಭ್ಯರಾದರೆ, ಆರ್ಸಿಬಿ ಪಾಲಿಗೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈ ಬಾರಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಕಬಳಿಸಿರುವುದು ಜೋಶ್ ಹೇಝಲ್ವುಡ್. ಆಡಿದ 10 ಪಂದ್ಯಗಳಲ್ಲಿ 36.5 ಓವರ್ಗಳನ್ನು ಎಸೆದಿರುವ ಹೇಝಲ್ವುಡ್ ಒಟ್ಟು 18 ವಿಕೆಟ್ಗಳನ್ನು ಕಬಳಿಸಿದ್ದಾರೆ.
4 / 5
ಹಾಗೆಯೇ 36.5 ಓವರ್ಗಳಲ್ಲಿ ಜೋಶ್ ಹೇಝಲ್ವುಡ್ 103 ಡಾಟ್ ಬಾಲ್ಗಳನ್ನು ಸಹ ಎಸೆದಿದ್ದಾರೆ. ಅಂದರೆ ಆರ್ಸಿಬಿ ಪರ ಈ ಬಾರಿ ಅತ್ಯಧಿಕ ಡಾಟ್ ಬಾಲ್ ಎಸೆದ ಹಾಗೂ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ನಿರ್ಣಾಯಕ ಹಂತದ ಪಂದ್ಯಗಳಿಗೆ ಅಲಭ್ಯರಾದರೆ, ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಹಿನ್ನಡೆಯನ್ನುಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.