
ಇಷ್ಟು ದಿನಗಳ ಕಾಲ ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದ ನಾಗ ಚೈತನ್ಯ ಮತ್ತು ಶೋಭಿತಾ ಅವರು ಈಗ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಹುಭಾಷೆಯಲ್ಲಿ ನಟಿ ಶೋಭಿತಾ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ವೆಬ್ ಸಿರೀಸ್ಗಳಲ್ಲಿ ಅವರು ನಟಿಸಿದ್ದಾರೆ. ಫ್ಯಾಷನ್ ಲೋಕದಲ್ಲೂ ಅವರು ತೊಡಗಿಕೊಂಡಿದ್ದಾರೆ. ನಾಗ ಚೈತನ್ಯ ಜೊತೆ ಎಂಗೇಜ್ಮೆಂಟ್ ಆಗಿದ್ದಕ್ಕೆ ಅವರಿಗೆ ಸಿಕ್ಕಾಪಟ್ಟೆ ಖುಷಿ ಆಗಿದೆ.

ಈ ಮೊದಲು ನಾಗ ಚೈತನ್ಯ ಮತ್ತು ಶೋಭಿತಾ ಅವರು ಯಾವುದೇ ಸಿನಿಮಾದಲ್ಲೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಆದರೂ ಕೂಡ ಅವರಿಬ್ಬರ ನಡುವೆ ಪರಿಚಯ ಬೆಳೆದು ಪ್ರೀತಿ ಮೂಡಿತು. ಪರಸ್ಪರ ಪ್ರೀತಿಸಿದ ಅವರು ಈಗ ಮದುವೆ ಆಗಲು ತಯಾರಾಗಿದ್ದಾರೆ.

ಸಮಂತಾ ರುತ್ ಪ್ರಭು ಜೊತೆಗಿನ ದಾಂಪತ್ಯ ಜೀವನಕ್ಕೆ ನಾಗ ಚೈತನ್ಯ ಅವರು ಅಂತ್ಯಹಾಡಿದ ಬಳಿಕ ಶೋಭಿತಾ ಜೊತೆ ಡೇಟಿಂಗ್ ಶುರು ಮಾಡಿಕೊಂಡಿದ್ದರು. ಕದ್ದುಮುಚ್ಚಿ ಸುತ್ತಾಡುತ್ತಿದ್ದ ಅವರ ಕೆಲವು ಫೋಟೋಗಳು ವೈರಲ್ ಆಗಿದ್ದವು. ಈಗ ಎಲ್ಲವೂ ಅಧಿಕೃತ ಆಗಿದೆ.

ಸದ್ಯಕ್ಕೆ ಸಮಂತಾ ಅವರು ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ. ಶೋಭಿತಾ ಮತ್ತು ನಾಗ ಚೈತನ್ಯ ಅವರ ಫೋಟೋಗಳಿಗೆ ಕಮೆಂಟ್ ಮಾಡಿರುವ ಅನೇಕರು ಸಮಂತಾ ವಿಚಾರವನ್ನು ಎಳೆದು ತರುತ್ತಿದ್ದಾರೆ. ಸಮಂತಾ ಪ್ರತಿಕ್ರಿಯೆ ನೀಡುತ್ತಾರಾ ಎಂಬ ಕೌತುಕ ಎಲ್ಲರಿಗೂ ಇದೆ.