- Kannada News Photo gallery Yadgir Kondamma Devi fair on Nagar Panchami: Devotees play with venomous scorpions, Karnataka news in kannada
ನಾಗರ ಪಂಚಮಿಯಂದೇ ಯಾದಗಿರಿಯ ಕೊಂಡಮ್ಮ ದೇವಿಯ ಜಾತ್ರೆ: ವಿಷಕಾರಿ ಚೇಳುಗಳೊಂದಿಗೆ ಭಕ್ತರ ಆಟ
ನಾಗರ ಪಂಚಮಿ ದಿನದಂದು ನಾಗಪ್ಪನ ಮೂರ್ತಿಗೆ ಹಾಲೆರುವುದು ಕಾಣುತ್ತೇವೆ. ಆದರೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಾತ್ರ ವಿಷಕಾರಿ ಚೇಳುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅದಕ್ಕೆ ಪ್ರಮುಖ ಕಾರಣವೇ ಈ ಗ್ರಾಮದ ಬೆಟ್ಟದ ಮೇಲಿರುವ ಕೊಂಡಮ್ಮ ದೇವಿ. ವಿಷ ಜಂತುಗಳ ಜೊತೆ ಚಿಣ್ಣರು, ಮಹಿಳೆಯರು, ದೊಡ್ಡವರು ಸಂಭ್ರಮ ಪಡುತ್ತಾರೆ.
Updated on: Aug 09, 2024 | 8:00 PM

ನಾಗರ ಪಂಚಮಿ ದಿನ ನಾಗಪ್ಪನ ಮೂರ್ತಿಗೆ ಹಾಲೆರುವುದು ಕಾಣುತ್ತೇವೆ. ಆದರೆ ಪಂಚಮಿ ದಿನವೇ ಆ ಗ್ರಾಮದಲ್ಲಿ ಚೇಳುಗಳನ್ನು ಪೂಜಿಸಿ ಆರಾಧಿಸುತ್ತಾರೆ. ನೀಜ ಚೇಳುಗಳನ್ನು ಕೈಮೇಲೆ, ಮೈಮೇಲೆ, ಬಾಯಲ್ಲಿ ಹಾಕಿಕೊಂಡು ಜಾತ್ರೆಯಲ್ಲಿ ಸಂಭ್ರಮ ಪಡುತ್ತಾರೆ. ವಿಷ ಜಂತುಗಳ ಜೊತೆ ಯಾವುದೇ ಭಯವಿಲ್ಲದೇ ಚಿಣ್ಣರು, ಮಹಿಳೆಯರು, ದೊಡ್ಡವರು ಸಂಭ್ರಮ ಪಡುತ್ತಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಾತ್ರ ಇಂದು ವಿಷಕಾರಿ ಚೇಳುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅದಕ್ಕೆ ಪ್ರಮುಖ ಕಾರಣವೇ ಈ ಗ್ರಾಮದ ಬೆಟ್ಟದ ಮೇಲಿರುವ ಕೊಂಡಮ್ಮ ದೇವಿ. ನಾಗರ ಪಂಚಮಿಯಂದು ಈ ಕೊಂಡಮ್ಮ ದೇವಿಯ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ವಿಶೇಷವೇ ಚೇಳುಗಳನ್ನ ಕೈಯಲ್ಲಿ ಹಿಡಿದು ಆಟ ಆಡುವುದು.

ಆಶ್ಚರ್ಯ ಪಡುವ ವಿಚಾರವೆಂದರೆ ಇಲ್ಲಿ ವಿಷಕಾರಿ ಚೇಳುಗಳು ಯಾರಿಗೂ ಕಚ್ಚುವುದಿಲ್ಲ. ಇದೆ ಕಾರಣದಿಂದ ಈ ದೇವಿಯ ದರ್ಶನಕ್ಕೆ ಬಂದ ಭಕ್ತರು ಈ ಬೆಟ್ಟದ ಮೇಲೆ ಕಲ್ಲುಗಳನ್ನ ಕಿತ್ತುವ ಮೂಲಕ ಚೇಳುಗಳನ್ನ ಹುಡುಕುತ್ತಾರೆ. ಈ ದೇವಸ್ಥಾನ ಸುತ್ತಮುತ್ತಲಿರುವ ಬೆಟ್ಟದ ಮೇಲೆ ಎಲ್ಲೇ ಕಲ್ಲುಗಳನ್ನ ಕಿತ್ತಿದ್ರು ಚೇಳುಗಳು ಕೈಗೆ ಸಿಗುತ್ತವೆ. ಇದೆ ಕಾರಣದಿಂದ ದೇವಿ ಜಾತ್ರೆಗಿಂತ ಇಲ್ಲಿ ಚೇಳುಗಳನ್ನ ಹಿಡಿಯಲು ಭಕ್ತರು ಬರುತ್ತಾರೆ.

ನಾಗರ ಪಂಚಮಿ ದಿನ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಾರೆ. ಕೇವಲ ಒಂದು ದಿನ ನಡೆಯುವ ಈ ಜಾತ್ರೆಗೆ ಸಾವಿರಾರು ಮಂದಿ ಭಕ್ತರು ಬಂದು ಮೊದಲು ಕೊಂಡಮ್ಮ ದೇವಿಯ ದರ್ಶನವನ್ನ ಪಡೆಯುತ್ತಾರೆ. ನಂತರ ಈ ಬೆಟ್ಟದ ಮೇಲೆ ಚೇಳುಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಇನ್ನು ದೇವಿ ಪವಾಡ ಹೇಗಿದೆ ಅಂದ್ರೆ ಇಲ್ಲಿನ ವಿಷಕಾರಿ ಚೇಳುಗಳು ಇದುವರೆಗೂ ಯಾರಿಗೂ ಕಚ್ಚಿರುವ ಉದಾಹರಣೆನೇ ಇಲ್ಲ.

ಇಂದು ಮಾತ್ರ ಈ ಸ್ಥಳದಲ್ಲಿ ಚೇಳುಗಳು ಹುಡುಕಿದ್ರೆ ಸಿಗುತ್ತವೆ. ನಾಳೆ ಬಂದು ಹುಡುಕಿದರೆ ಒಂದೇ ಒಂದು ಚೇಳು ಸಿಗೋದಿಲ್ಲ ಎನ್ನುವುದು ಇಲ್ಲಿಗೆ ಬಂದ ಭಕ್ತರ ಮಾತಾಗಿದ್ದು, ಇದು ನಿಜ ಕೂಡ ಹೌದು.

ಕೊಂಡಮ್ಮ ದೇವಿಯ ದರ್ಶನಕ್ಕೆ ಬಂದ ಭಕ್ತರು ಚೇಳಿನ ಜೊತೆ ಆಟವಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಇದು ಪವಾಡ ಅಂತಾನೆ ಹೇಳಬಹುದು.



















