ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.
ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್ನ ಖ್ಯಾತ ಫುಟ್ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.
ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.
ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.
ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.
ಡೇವಿಡ್ ಬೆಕಮ್ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.