IPL 2022: ಐಪಿಎಲ್​ನಿಂದ ಹಿಂದೆ ಸರಿದ 6 ಸ್ಟಾರ್ ಆಟಗಾರರು ಇವರೇ..!

IPL 2022 Mega Auction Players List: ಯುವ ಆಲ್​ರೌಂಡರ್ ಸ್ಯಾಮ್ ಕರನ್ ಮುಂದಿನ ಸೀಸನ್​ ಐಪಿಎಲ್ ಆಡುವುದಿಲ್ಲ. ಹಾಗಿದ್ರೆ ಈ ಬಾರಿಯ ಮೆಗಾ ಹರಾಜಿನಿಂದ ಹೊರಗುಳಿದ 6 ಸ್ಟಾರ್ ಆಟಗಾರರು ಯಾರೆಲ್ಲಾ ನೋಡೋಣ...

Jan 22, 2022 | 2:40 PM
TV9kannada Web Team

| Edited By: Zahir PY

Jan 22, 2022 | 2:40 PM

ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೆ ಬರೋಬ್ಬರಿ 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರಿದ್ದರೆ, 318 ವಿದೇಶಿ ಆಟಗಾರರಿದ್ದಾರೆ. ಅಚ್ಚರಿ ಎಂದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಕ್ರಿಸ್ ಗೇಲ್ ಸೇರಿದಂತೆ ಆರು ಸ್ಟಾರ್ ಆಟಗಾರರು​ ಕಾಣಿಸಿಕೊಳ್ಳುತ್ತಿಲ್ಲ.

1 / 8
ಅದರಂತೆ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ್ದ ಗೇಲ್, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಯುವ ಆಲ್​ರೌಂಡರ್ ಸ್ಯಾಮ್ ಕರನ್ ಮುಂದಿನ ಸೀಸನ್​ ಐಪಿಎಲ್ ಆಡುವುದಿಲ್ಲ. ಹಾಗಿದ್ರೆ ಈ ಬಾರಿಯ ಮೆಗಾ ಹರಾಜಿನಿಂದ ಹೊರಗುಳಿದ 6 ಸ್ಟಾರ್ ಆಟಗಾರರು ಯಾರೆಲ್ಲಾ ನೋಡೋಣ...

2 / 8
1. ಕ್ರಿಸ್ ಗೇಲ್: ಮುಂಬರುವ ಮೆಗಾ ಹರಾಜಿಗೆ ಯೂನಿವರ್ಸ್ ಬಾಸ್ ಹೆಸರು ನೀಡಿಲ್ಲ. ಇದರೊಂದಿಗೆ ಗೇಲ್ ಅವರ ಐಪಿಎಲ್ ಯುಗಾಂತ್ಯವಾಗಿದೆ. ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿರುವ ಗೇಲ್ ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.

3 / 8
2. ಬೆನ್ ಸ್ಟೋಕ್ಸ್: ಗಾಯದ ಕಾರಣ ಕಳೆದ ಸೀಸನ್ ಐಪಿಎಲ್​ನಿಂದ ಹೊರಗುಳಿದಿದ್ದ ಇಂಗ್ಲೆಂಡ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್​ ಅವರನ್ನು ಈ ಬಾರಿ ರಾಜಸ್ಥಾನ್ ರಾಯಲ್ಸ್ ಬಿಡುಗಡೆ ಮಾಡಿತ್ತು. ಇನ್ನು ಆ್ಯಶಸ್ ಸರಣಿ ಮೂಲಕ ಕಂಬ್ಯಾಕ್ ಮಾಡಿದ್ದ ಸ್ಟೋಕ್ಸ್​ ಇದೀಗ ಟೆಸ್ಟ್​ ಕ್ರಿಕೆಟ್​ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲು ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

4 / 8
3. ಸ್ಯಾಮ್ ಕರನ್: 2021ರ ಐಪಿಎಲ್​ನಲ್ಲಿ ಸಿಎಸ್​ಕೆ ತಂಡದ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಕೂಡ ಫಿಟ್​ನೆಸ್ ಸಮಸ್ಯೆಯಿಂದಾಗಿ ಮುಂದಿನ ಸೀಸನ್​ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

5 / 8
4. ಜೋಫ್ರಾ ಆರ್ಚರ್: ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜೋಫ್ರಾ ಆರ್ಚರ್ ಕೂಡ ಐಪಿಎಲ್ 2022 ರ ಮೆಗಾ ಹರಾಜಿಗಾಗಿ ಹೆಸರು ನೀಡಿಲ್ಲ. ಆರ್ಚರ್ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡ ಖಾಯಂ ಸದಸ್ಯರಾಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್​ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿದ್ದರು.

6 / 8
5. ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​ ಕೂಡ ಈ ಬಾರಿ ಹೆಸರು ನೋಂದಣಿ ಮಾಡಿಕೊಂಡಿಲ್ಲ. 2018 ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಸ್ಟಾರ್ಕ್​ ಅವರನ್ನು ಕೆಕೆಆರ್ ಖರೀದಿಸಿತ್ತು. ಆದರೆ ಗಾಯದ ಕಾರಣ ಐಪಿಎಲ್​ನಿಂದ ಹಿಂದೆ ಸರಿದಿದ್ದರು. ಇದಾದ ಬಳಿಕ ಸ್ಟಾರ್ಕ್ ಐಪಿಎಲ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾಗ್ಯೂ ಈ ಬಾರಿ ಹೆಸರು ನೀಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಈ ಬಾರಿ ಕೂಡ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

7 / 8
6- ಕ್ರಿಸ್ ವೋಕ್ಸ್: ಇಂಗ್ಲೆಂಡ್ ಆಲ್​ರೌಂಡರ್ ಕ್ರಿಸ್ ವೋಕ್ಸ್ ಈ ಹಿಂದೆ ಆರ್​ಸಿಬಿ, ಕೆಕೆಆರ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಆದರೆ ಗಾಯದ ಕಾರಣ ವೋಕ್ಸ್ ಕಳೆದ ಕೆಲ ಸೀಸನ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾಗ್ಯೂ ಈ ಬಾರಿ ಕ್ರಿಸ್ ವೋಕ್ಸ್ ಹೆಸರು ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಕ್ರಿಸ್ ವೋಕ್ಸ್ ಕೂಡ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

8 / 8

Follow us on

Most Read Stories

Click on your DTH Provider to Add TV9 Kannada