- Kannada News Photo gallery Stray cattle trampling amid traffic snarl in Bengaluru: BBMP negligence, Karnataka news in kannada
ಬೆಂಗಳೂರಿನಲ್ಲಿ ಟ್ರಾಫಿಕ್ ತಲೆಬಿಸಿ ಮಧ್ಯೆ ಬೀದಿ ದನಗಳ ಉಪಟಳ: ಬಿಬಿಎಂಪಿ ನಿರ್ಲಕ್ಷ್ಯ
ಬೆಂಗಳೂರಿನಲ್ಲಿ ಬೀದಿ ದನಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಟಿವಿ9 ನಿರಂತರ ವರದಿ ಪ್ರಸಾರ ಮಾಡುವ ಮೂಲಕ ಬಿಬಿಎಂಪಿ ಗಮನಕ್ಕೆ ತರುವ ಕೆಲಸ ಮಾಡಲಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಪಾಲಿಕೆ ಬೀದಿ ದನಗಳ ಕಂಟ್ರೊಲ್‌ಗೆ ನಿರ್ಲಕ್ಷ ವಹಿಸಿದಂತ್ತಿದೆ. ಇದು ಟ್ರಾಫಿಕ್ಗೂ ಸಮಸ್ಯೆ ಉಂಟಾಗುತ್ತಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Updated on: Aug 21, 2024 | 9:48 PM

ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಒಂದಡೆಯಾದರೆ, ಈ ಟ್ರಾಫಿಕ್ ಸಮಸ್ಯೆ ಜೊತೆಗೆ ಅಪಘಾತ ಹೆಚ್ಚಾಗಲು ಕಾರಣವಾಗುತ್ತಿರುವ ಬೀದಿ ದನಗಳ ಕುರಿತಂತೆ ಟಿವಿ9 ನಿರಂತರ ವರದಿ ಮಾಡಿ ಪಾಲಿಕೆ ಅಧಿಕಾರಿಗಳ ಎಚ್ಚರಿಸುವ ಕೆಲಸ ಮಾಡುತ್ತಿದೆ. ಆದರು ಕೂಡ ಅಧಿಕಾರಿಗಳು ಎಚ್ಚತ್ತುಕೊಂಡಂತೆ ಕಾಣುತ್ತಿಲ್ಲ.

ಬೀದಿ ದನಗಳ ಕುರಿತಂತೆ ಟಿವಿ9 ನಿರಂತರವಾಗಿ ಸುದ್ದಿ ಮಾಡಿ ಎಚ್ಚರಿಸಿದರು ಕೂಡ ಪಾಲಿಕೆ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದನಗಳ ಹಾವಳಿಯಿಂದಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಜೊತೆಗೆ ಅಪಘಾತಗಳ ಸಂಖ್ಯೆ ಹೆಚ್ಚಳ ಆಗುತ್ತಿದೆ.

ಕೋರಮಂಗಲದ ಸರ್ಜಾಪುರ ಮುಖ್ಯ ರಸ್ತೆಯ ಮಧ್ಯದಲ್ಲೆ ಬೀದಾಡಿ ದನಗಳು ಕುಳಿತುಕೊಂಡಿರುತ್ತವೆ. ಇದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಹೀಗಿದ್ದರು. ಕೂಡ ಪಾಲಿಕೆ ಅಧಿಕಾರಿಗಳು ಬೀದಿ ದನಗಳ ಕಂಟ್ರೊಲ್ ಮಾಡುತ್ತಿಲ್ಲ ಎಂದು ಆಟೋ ಚಾಲಕ ಸೋಮಶೇಖರ್ ಎಂಬುವವರು ಆಕ್ರೋಶ ಹೊರ ಹಾಕಿದ್ದಾರೆ.

ಪಿಕ್ ಅವರ್ ಸಂದರ್ಭದಲ್ಲಿ ದಾರಿಗೆ ಅಡ್ಡಲಾಗಿ ಬರುವ ದನಗಳಿಂದ ಟ್ರಾಫಿಕ್ ಜಾಮ್ ಉಂಟಾದರೆ ಮತ್ತೊಂದೆಡೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡಬೇಕೆಂದರು ದನಗಳ ಭಯ ಪಡುತ್ತಾರೆ ಯಾವಾಗ ಬಂದು ಗುದ್ದುತ್ತವೆ, ಏನು ಮಾಡ್ತವೆ ಅಂತ ಗೊತ್ತಾಗಲ್ಲ.

ಬೀದಿ ದನಗಳನ್ನ ಗೋಶಾಲೆಗೆ ಬಿಡಬೇಕು. ಈ ಕೆಲಸ ಪಾಲಿಕೆ ಅಧಿಕಾರಿಗಳು ಮಾಡಬೇಕು ಆದರೆ ಅವರು ಮಾಡ್ತಿಲ್ಲ. ಇದರಿಂದಾಗಿ ವಾಹನ ಸವಾರರ ಓಡಾಟಕ್ಕೆ ತುಂಬಾ ತೊಂದರೆ ಆಗುತ್ತೆ ಹೀಗಾಗಿ ಬೀದಿ ದನಗಳ ನಿಯಂತ್ರಣ ಮಾಡಲೆಬೇಕು ಎನ್ನುತ್ತಾರೆ ವಾಹನ ಸವಾರರು.

ಇನ್ನಾದರು ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ದನಗಳ ಉಪಟಳಕ್ಕೆ ಬ್ರೇಕ್ ಹಾಕಲು ಮುಂದಾಗುತ್ತಾರಾ ಇಲ್ವಾ ಕಾದು ನೋಡಬೇಕಿದೆ.



