AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Strom R3: ಬರೋಬ್ಬರಿ 200 ಕಿ.ಮೀ ಮೈಲೇಜ್: ಈ ಕಾರಿನ ಬೆಲೆ ಕೇವಲ 4.5 ಲಕ್ಷ ರೂ.

Strom R3 Price: ಡೈಮಂಡ್ ಕಟ್ ವಿನ್ಯಾಸದಲ್ಲಿ ರೂಪಿಸಲಾಗಿರುವ ಈ ತ್ರಿಚಕ್ರ ವಾಹನದಲ್ಲಿ ಸನ್​ ರೂಫ್​ ಕೂಡ ನೀಡಲಾಗಿರುವುದು ಮತ್ತೊಂದು ವಿಶೇಷ.

TV9 Web
| Edited By: |

Updated on:Sep 19, 2022 | 6:10 PM

Share
ಪೆಟ್ರೋಲ್-ಡಿಸೇಲ್​ ಬೆಲೆಗಳು ಗಗನಕ್ಕೇರುತ್ತಿದ್ದಂತೆ ವಾಹನ ಪ್ರಿಯರು ಎಲೆಕ್ಟ್ರಿಕ್​ ವೆಹಿಕಲ್​ನತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಹಲವು ಕಂಪೆನಿಗಳು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಿದೆ. ಆದರೆ ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು ತುಸು ದುಬಾರಿ ಎಂಬ ಮಾತು ಕೇಳಿ ಬರುತ್ತದೆ. ಆದರೆ ಇದೀಗ ಸಾಮಾನ್ಯ ಬೆಲೆಗೆ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ ಭಾರತದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಸ್ಟ್ರೋಮ್ ಮೋಟಾರ್ಸ್.

1 / 7
ಸ್ಟ್ರೋಮ್ ಮೋಟಾರ್ಸ್ ಕಂಪೆನಿಯು R3 ಹೆಸರಿನ ಸಣ್ಣ ಮಾದರಿಯ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದು, ಶೀಘ್ರದಲ್ಲೇ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವಿಶೇಷ ಎಂದರೆ ಭಾರತದ ಇತರೆ ಎಲೆಕ್ಟ್ರಿಕ್ ಕಾರುಗಳು ಹೋಲಿಸಿದರೆ ಸ್ಟ್ರೋಮ್ ಆರ್​3 ಕಾರು ಅತ್ಯುತ್ತಮ ರೇಂಜ್ (ಮೈಲೇಜ್) ನೀಡಲಿದೆ.

2 / 7
ಅಂದರೆ ಈ ಕಾರಿನಲ್ಲಿ 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರ್ ನೀಡಲಾಗಿದ್ದು, ಇದು 15 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.  ಹಾಗೆಯೇ ಕಾರಿನ ಟಾರ್ಕ್ 90 ಎನ್ಎಂ ಆಗಿರುತ್ತದೆ. ಇನ್ನು ಈ ಕಾರನ್ನು  ಮೂರು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 200 ಕಿ.ಮೀ. ದೂರದವರೆಗೆ ಪ್ರಯಾಣಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

3 / 7
ಇದು ಮೂರು ಚಕ್ರದ ಕಾರು ಎಂಬುದು ವಿಶೇಷ. ಅಂದರೆ ಮುಂಭಾಗದಲ್ಲಿ 2 ಟಯರ್​​ಗಳನ್ನು ನೀಡಲಾಗಿದ್ದರೆ, ಹಿಂಭಾಗದಲ್ಲಿ ಏಕೈಕ ಟಯರ್ ನೀಡಲಾಗಿದೆ. ಇದಾಗ್ಯೂ ಈ ಕಾರಿನ ಗರಿಷ್ಠ ವೇಗವು 80 ಕಿ.ಮೀ. ಇದೆ. ಹೀಗಾಗಿ ದೂರದ ಪ್ರಯಾಣಕ್ಕೂ ಈ ಕಾರನ್ನು ಬಳಸಿಕೊಳ್ಳಬಹುದು.

4 / 7
ಡೈಮಂಡ್ ಕಟ್ ವಿನ್ಯಾಸದಲ್ಲಿ ರೂಪಿಸಲಾಗಿರುವ ಈ ತ್ರಿಚಕ್ರ ವಾಹನದಲ್ಲಿ ಸನ್​ ರೂಫ್​ ಕೂಡ ನೀಡಲಾಗಿರುವುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲದೆ ಈ ಕಾರಿನಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ.

5 / 7
ಇನ್ನು  R3 ಕಾರಿನಲ್ಲಿ ಒಂದೇ ಡೋರ್ ಕೂಪ್ ನೀಡಲಾಗಿದೆ. ಹಾಗೆಯೇ ಕೀ ಲೆಸ್ ಎಂಟ್ರಿ, ಪವರ್ ವಿಂಡೋ, ಡಿಜಿಟಲ್ ಡಿಸ್‌ಪ್ಲೇ, ಕ್ಲೈಮೇಟ್ ಕಂಟ್ರೋಲ್ ಎಸಿ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಜಿಪಿಎಸ್ ನ್ಯಾವಿಗೇಷನ್ ಮತ್ತು ಗೆಸ್ಚರ್ ಕಂಟ್ರೋಲ್ ಸಹ ಇರಲಿದೆ. ಹಾಗೆಯೇ ಪಾರ್ಕಿಂಗ್ ಅಸಿಸ್ಟ್ ಮತ್ತು ರಿವರ್ಸ್ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ.

6 / 7
ಸ್ಟ್ರೋಮ್ ಮೋಟಾರ್ಸ್ ಮೂಲಗಳ ಮಾಹಿತಿ ಪ್ರಕಾರ ಸ್ಟ್ರೋಮ್ R3 ಕಾರಿನ ಆರಂಭಿಕ ಬೆಲೆ 4.5 ಲಕ್ಷ ರೂ. ಇರಲಿದೆ. ಅಂದರೆ 5 ಲಕ್ಷಕ್ಕೂ ಕಡಿಮೆ ಬೆಲೆಗೆ ಆರ್​3 ಭಾರತೀಯ ರಸ್ತೆಗಳಿದರೆ ಎಲೆಕ್ಟ್ರಿಕ್ ಕಾರುಗಳಿಗೆ ದೊಡ್ಡ ಪೈಪೋಟಿ ನೀಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

7 / 7

Published On - 6:10 pm, Mon, 19 September 22

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ

5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ