ಸಾಮಾನ್ಯವಾಗಿ ಮನೆಯಲ್ಲಿ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಹಾಗೂ ನಕಾರಾತ್ಮಕ ಶಕ್ತಿ ನಿವಾರಣೆ ಮಾಡಿಕೊಳ್ಳಲು ಈ ಸಣ್ಣ ಪರಿಹಾರವನ್ನು ಮಾಡಿ ನೋಡಬಹುದು. ಇದು ಸರಳವಾಗಿರುವುದರಿಂದ ಯಾರೂ ಬೇಕಾದರೂ ಕೂಡ ಮಾಡಬಹುದಾಗಿದೆ.
ಒಂದು ಮಣ್ಣಿನ ಹಣತೆ ಅಥವಾ ಪಣತಿಯನ್ನು ತೆಗೆದುಕೊಂಡು ಅದಕ್ಕೆ ಪಲಾವ್ ಎಲೆ ಅಥವಾ ಬೇ ಲೀಫ್ ಅನ್ನು ಕೈಯಲ್ಲಿಯೇ ತುಂಡು ತುಂಡು ಮಾಡಿಕೊಂಡು ಆ ಹಣತೆಗೆ ಹಾಕಿಕೊಳ್ಳಿ.
ಬಳಿಕ ಅದೇ ಹಣತೆಗೆ ಒಂದು ಏಲಕ್ಕಿ, ಐದರಿಂದ ಆರು ಬೇವಿನ ಎಲೆಯನ್ನು ಕೂಡ ಅದಕ್ಕೆ ಹಾಕಿಕೊಳ್ಳಿ, ನಂತರ ಐದು ಲವಂಗವನ್ನು ಕೂಡ ಅದಕ್ಕೆ ಸೇರಿಸಿಕೊಂಡು ಅದರ ಮೇಲೆ ಎರಡು ಕರ್ಪೂರ ಹಾಕಿ ಬೆಂಕಿ ಹಚ್ಚಿರಿ.
ಈ ಸರಳ ಪರಿಹಾರವನ್ನು ನೀವು ಬುಧವಾರ ಅಥವಾ ಶನಿವಾರ ಸಂಜೆ ಮನೆಯಲ್ಲಿ ದೀಪ ಹಚ್ಚಿದ ನಂತರ ಮಾಡಬೇಕು. ಇದನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿ ಹಾಗೂ ಪದೇಪದೇ ಕಾಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಈ ಮಾಹಿತಿಯನ್ನು om_shree22 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನಿಮ್ಮ ಮನೆಯಲ್ಲಿಯೂ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಮಾಡಿ ನೋಡಿ ಪರಿಹಾರ ಪಡೆಯಬಹುದು.